×
Ad

ಏರ್ ಇಂಡಿಯಾ ಸಾಫ್ಟ್‌ವೇರ್ ಸ್ಥಗಿತದ ಪರಿಣಾಮ 137 ವಿಮಾನ ಹಾರಾಟ ವಿಳಂಬ

Update: 2019-04-28 12:52 IST

ಹೊಸದಿಲ್ಲಿ, ಎ.28: ಶನಿವಾರ ಬೆಳಗ್ಗೆ ಸುಮಾರು ಐದು ಗಂಟೆಗಳ ಕಾಲ ಏರ್ ಇಂಡಿಯಾದ ಸಾಫ್ಟ್‌ವೇರ್ ಸ್ಥಗಿತಗೊಂಡಿರುವ ಬಳಿಕ ಉಂಟಾದ ಪ್ರತಿಕೂಲ ಪರಿಣಾಮ ಈಗಲೂ ಮುಂದುವರಿದಿದ್ದು ರವಿವಾರ 137 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸುತ್ತಿವೆ ಎಂದು ಏರ್‌ಲೈನ್ ಮೂಲಗಳು ತಿಳಿಸಿವೆ.

 ರವಿವಾರ 137 ವಿಮಾನಗಳು 197 ನಿಮಿಷಗಳ ಕಾಲ ವಿಳಂಬವಾಗಿ ಹಾರಾಟ ನಡೆಸುತ್ತಿವೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 3:30ರಿಂದ 8:45ರ ತನಕ ತಾಂತ್ರಿಕ ದೋಷದಿಂದಾಗಿ ಬ್ಯಾಗೇಜ್ ಹಾಗೂ ರಿಸರ್ವೇಶನ್‌ನ್ನು ಪರೀಕ್ಷಿಸುವ ಏರ್ ಇಂಡಿಯಾ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ ಸಾಫ್ಟ್‌ವೇರ್  ಸ್ಥಗಿತಗೊಂಡ ಪರಿಣಾಮ ವಿಶ್ವದಾದ್ಯಂತ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು. ಸಾಫ್ಟ್‌ವೇರ್ ಸ್ಥಗಿತಗೊಂಡ ಪರಿಣಾಮ ಶನಿವಾರ ಒಟ್ಟು 149 ವಿಮಾನಗಳು ವಿಳಂಬವಾಗಿ ಸಂಚರಿಸಿವೆ ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News