×
Ad

ಪ್ರವಾದಿ ಜೀವನ ಅನುಸರಿಸಿದರೆ ಆತ್ಮದ ಕಾಯಿಲೆ ಗುಣ: ಅಲ್ಲಾಮ ಖಮರುಝ್ಝಮಾನ್ ಅಝ್ಮಿ

Update: 2019-04-28 18:16 IST

ಉಡುಪಿ, ಎ.28: ದೇಹಕ್ಕೆ ಖಾಯಿಲೆ ಬಂದರೆ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ. ಆದರೆ ನಮ್ಮ ಆತ್ಮಕ್ಕೆ ಬಂದ ಕಾಯಿಲೆ ಗುಣ ಆಗಬೇಕಾದರೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅನುಸರಿಸಿರುವ ಜೀವನ ನಡೆಸಬೇಕಾಗಿದೆ ಎಂದು ಅತಾಯೇ ಹುಜ್ಹೂರ್ ಮುಫ್ತಿಎ ಆಝಮ್ ಎ ಹಿಂದ್(ವರ್ಲ್ಡ್ ಇಸ್ಲಾಮಿಕ್ ಮಿಶನ್ ಲಂಡನ್) ಅಲ್ಲಾಮ ಖಮರುಝ್ಝಮಾನ್ ಅಝ್ಮಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಸುನ್ನಿ ದಾವತೇ ಇಸ್ಲಾಮೀ ವತಿಯಿಂದ ಉಡುಪಿಯ ಕೊಳಂಬೆ ಶಾಂತಿನಗರ ಮದೀನ ಮಸೀದಿಯ ಸಮೀಪ ಶನಿವಾರ ಆಯೋಜಿಸಲಾದ ದ್ವಿತೀಯ ವರ್ಷದ ಸುನ್ನಿ ಇಜ್ತಿಮಾ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಸುನ್ನೀ ದಾವತೇ ಇಸ್ಲಾಮಿಯ ಅಮೀರೆ ಅಲ್ಲಾಮ ಮೌಲಾನ ಮೊಹಮ್ಮದ್ ಶಾಕಿರ್ ಅಲಿ ನೂರಿ ಮುಂಬೈ ಮಾತನಾಡಿ, ಇಸ್ಲಾಮಿನಲ್ಲಿ ನಿಷೇಧಿಸಲ್ಪಟ್ಟ ಆಹಾರವನ್ನು ಸೇವನೆ ಮಾಡಿದರೆ ದೇವರು ನಮ್ಮ ಪ್ರಾರ್ಥನೆಯನು್ನ ಸ್ವಿಕರಿಸುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಜ್ಮೀರ್ ಶರೀಫ್ ಎಸ್‌ಡಿಐ ನಿಗ್‌ರಾ ಹಾಫಿಝ್ ಮೊಹಮ್ಮದ್ ಮೋಯಿನುದ್ದೀನ್ ಖಾದ್ರಿ, ಹುಬ್ಬಳ್ಳಿ. ಎಸ್‌ಡಿಐ ಮುಬಲ್ಲಿಗ್ ನಾತ್‌ಖಾಃ ಮೊಹಮ್ಮದ್ ಹುಸೇನ್ ಸಾಹಬ್ ಹಾಗೂ ಜಿಲ್ಲೆಯ ಅನೇಕ ಉಲಮ ಹಾಗೂ ಸಾದಾತುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News