×
Ad

ತಲಪಾಡಿ: ಮಸ್ಜಿದ್ ಆಯಿಷಾ ಲೋಕಾರ್ಪಣೆ

Update: 2019-04-28 18:35 IST

ಬಂಟ್ವಾಳ, ಎ. 28: ಬಿ.ಸಿ.ರೋಡ್-ತಲಪಾಡಿಯ ಮಾಫತ್ಲಾಲ್ ಲೇಔಟ್‍ನಲ್ಲಿ ನಿರ್ಮಾಣಗೊಂಡ ನೂತನ "ಮಸ್ಜಿದ್ ಆಯಿಷಾ" ಮಸೀದಿಯನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ರವಿವಾರ ಲೋಕಾರ್ಪಣೆ ಮಾಡಿದರು. ಬಿಎಚ್‍ಬಿ ಗ್ರೂಪ್‍ನಿಂದ ನಿರ್ಮಾಣಗೊಂಡ ಈ ನೂತನ ಮಸೀದಿಯು ತಲಪಾಡಿ ಜುಮಾ ಮಸೀದಿಯ ಅಧೀನಕ್ಕೆ ಒಳಪಟ್ಟಿರುತ್ತದೆ. 

ಕಾರ್ಯಕ್ರಮದಲ್ಲಿ ಗೇರು ನಿಗಮದ ಮಾಜಿ ಅಧ್ಯಕ್ಷ, ಬಿಎಚ್‍ಬಿ ಗ್ರೂಪ್‍ನ ಹಾಜಿ ಬಿ.ಎಚ್. ಅಬ್ದುಲ್ ಖಾದರ್, ಧಾರ್ಮಿಕ ಮುಖಂಡರಾದ ಅಥಾವುಲ್ಲಾ ತಂಙಳ್ ಮಂಜೇಶ್ವರ, ಸ್ವಾದಿಕ್ ಹಾಜಿ, ಬಂಟ್ವಾಳ ಖತೀಬ್ ಉಸ್ಮಾನ್ ದಾರಿಮಿ, ತಲಪಾಡಿ ಖತೀಬ್ ಸ್ವಾದಿಖ್ ಅಝ್ಹರಿ ಕೊಪ್ಪ, ಕಣ್ಣೂರು ಮಸೀದಿಯ ಖತೀಬ್ ಅನ್ಸಾರ್ ಫೈಝಿ, ರಿಯಾಝ್ ಬಂಟ್ವಾಳ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News