ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷರಾಗಿ ವೇಣುಗೋಪಾಲ್ ಆಯ್ಕೆ
ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್‍ಕ್ಲಬ್(ರಿ) ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಯಕಿರಣ ಪತ್ರಿಕೆಯ ವರದಿಗಾರ ವೇಣುಗೋಪಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ "ನಮ್ಮ ಬೆದ್ರ" ಪತ್ರಿಕೆಯ ಪ್ರಧಾನ ಸಂಪಾದಕ ಬಿ.ಕೆ ಅಶ್ರಫ್ ವಾಲ್ಪಾಡಿ, ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾಗಿ ಯಶೋಧರ ವಿ.ಬಂಗೇರಾ, ಕೋಶಾಧಿಕಾರಿಯಾಗಿ ಕನ್ನಡಪ್ರಭ ವರದಿಗಾರ ಗಣೇಶ್ ಕಾಮತ್ ಪುನಾರಾಯ್ಕೆಗೊಂಡರು.
ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳಾಗಿ ಪ್ರಸನ್ನ ಹೆಗ್ಡೆ, ಸೀತಾರಾಮ ಆಚಾರ್ಯ, ಧನಂಜಯ ಮೂಡುಬಿದಿರೆ, ಪ್ರೇಮಶ್ರೀ ಕಲ್ಲಬೆಟ್ಟು, ಜೈಸನ್ ತಾಕೋಡೆ, ರಾಘವೇಂದ್ರ ಶೆಟ್ಟಿ, ಪದ್ಮಶ್ರೀ ಭಟ್ ನಿಡ್ಡೋಡಿ, ಶರತ್ ದೇವಾಡಿಗ, ದೀವಿತ್ ಎಸ್.ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಅಧ್ಯಕ್ಷ ಜೈಸನ್ ತಾಕೋಡೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ವರ್ಷದ ಕ್ರೀಯಾಶಿಲ ಪತ್ರಕರ್ತನಾಗಿ ಯಶೋಧರ ವಿ. ಬಂಗೇರಾ ಅವರನ್ನು ಗುರುತಿಸಲಾಯಿತು.