ಯೇನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯೆನ್-ಸ್ಪ್ಲಾಷ್ 2019
ಮೂಡಬಿದಿರೆ: ಯೇನೆಪೋಯ ತಾಂತ್ರಿಕ ಮಹಾವಿದ್ಯಾಲಯ, ತೋಡಾರು ಇದರ ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ “ಯೆನ್-ಸ್ಪ್ಲಾಷ್ 2019”ದ ಉದ್ಘಾಟನಾ ಸಮಾರಂಭವು ದಿನಾಂಕ 26/04/19ರಂದು ಕಾಲೇಜಿನ ರಂಗಮಂಟಪದಲ್ಲಿ ನಡೆಯಿತು. ಈ ಸಭಾಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕು. ಅಂಕಿತಾ ಶೆಟ್ಟಿ, ಸ್ತ್ರೀ ಸ್ವರಕ್ಷಣೆ ತರಬೇತುಗಾರ್ತಿ ಮತ್ತು ವ್ಯಾಪಾರ ವಿಶ್ಲೇಷಕಿ, ಮಂಗಳೂರು ಇವರು ಆಗಮಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅರ್. ಜಿ. ಡಿಸೋಜರವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಶ್ರೀಯುತ ಅಶೋಕ್ ಶೆಟ್ಟಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಕಿತಾ ಶೆಟ್ಟಿ ವಿದ್ಯಾರ್ಥಿಗಳು ಓದಿನ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಉತ್ಸವದಲ್ಲಿ 20ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೊದಲನೇ ದಿನದ ಮುಖ್ಯ ಆಕರ್ಷಣೆಯಾಗಿ ಬ್ಯಾಟಲ್ ಆಫ್ ಬ್ಯಾಂಡ್ಸ್ ಹಾಗೂ ಎರಡನೇ ದಿನದ ಆಕರ್ಷಣೆಯಾಗಿ ಇಡಿಎಮ್ ನೈಟ್ ವಿಥ್ ಝೆಫೈರ್ಟೋನ್ ಹಮ್ಮಿಕೊಳ್ಳಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜಾಸಿರ್ ಸ್ವಾಗತಿಸಿದರು ಹಾಗೂ ಕು. ಸಹನಾ ನಿರೂಪಿಸಿದರು.