×
Ad

ಮಂಗಳೂರು: ಫ್ಲ್ಯಾಟ್‌ನಿಂದ ಬಿದ್ದು ವ್ಯಕ್ತಿ ಸಾವು

Update: 2019-04-28 21:03 IST

ಮಂಗಳೂರು, ಎ.28: ನಗರದ ಕೊಡಿಯಾಲ್‌ಗುತ್ತು ಸಮೀಪದ ಫ್ಲ್ಯಾಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಕೊಡಿಯಾಲ್‌ಬೈಲ್ ನಿವಾಸಿ ರಾಜೇಶ್ ಶೆಣೈ (38) ಮೃತಪಟ್ಟವರು.

ರಾಜೇಶ್ ಅವರ ಕುಟುಂಬ ಕೊಡಿಯಾಲ್‌ಗುತ್ತುವಿನಲ್ಲಿರುವ ಫ್ಲ್ಯಾಟ್‌ವೊಂದರ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ರಾಜೇಶ್ ಅವರು ಹಲವು ಸಮಯದಿಂದ ಅಪಸ್ಮಾರ (ಮೂರ್ಛೆರೋಗ) ಕಾಯಿಲೆಯಿಂದ ಬಳಲುತ್ತಿದ್ದು, ರವಿವಾರ ಸಂಜೆ ತಿರುಗಾಡಲು ಫ್ಲ್ಯಾಟ್‌ನ ಹೊರಗಿರುವ ತೆರೆದ ಗ್ಯಾಲರಿಗೆ ಬಂದಾಗ ಏಕಾಏಕಿ ಸ್ಮೃತಿ ತಪ್ಪಿ 2ನೇ ಮಹಡಿಯಿಂದ ಕೆಳಗಿ ಬಿದ್ದಿದ್ದಾರೆ.

ಸ್ಥಳೀಯರು ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ, ಪ್ರಯೋಜನವಾಗದೆ ಮೃತಪಟ್ಟಿದ್ದಾರೆ. ಘಟನೆ ನಡೆಯುವ ವೇಳೆ ರಾಜೇಶ್ ಅವರ ತಾಯಿ ಮಾತ್ರ ಮನೆಯಲ್ಲಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗಡೆ ಹೋಗಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News