×
Ad

ಮಂಗಳೂರು: ಶ್ರೀರಾಮೋತ್ಸವ ಸಮಾರೋಪ

Update: 2019-04-28 21:15 IST

ಮಂಗಳೂರು, ಎ.28: ರಾಮಮಂದಿರ ನಿರ್ಮಿಸುವ ಆಸಕ್ತಿ ಕಡಿಮೆಯಾಗಿದೆ ಎಂದು ಡಾ.ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ. ನಗರದ ನೆಹರೂ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಾತೃ ಶಕ್ತಿ, ದುರ್ಗಾವಾಹಿನಿ ಮತ್ತು ರಾಮೋತ್ಸವ ಸಮತಿ ವತಿಯಿಂದ ಎ.26ರಿಂದ ಮೂರು ದಿನಗಳಿಂದ ನಡೆದ ಶ್ರೀ ರಾಮೋತ್ಸವ ರವಿವಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅಶೋಕ್ ಸಿಂಘಾಲ್‌ರಂತಹ ವ್ಯಕ್ತಿಗಳು ರಾಮಮಂದಿರ ನಿರ್ಮಾಣವಾಗಬೇಕು ಎಂದು ಆಸೆ ಹೊಂದಿದವರು ಇಂದು ನಮ್ಮ ಮಧ್ಯೆ ಇಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ನಮ್ಮ ಸ್ವಾರ್ಥ ಪರವಾದ ಚಿಂತನೆ, ಧಾರ್ಮಿಕ ಶ್ರದ್ಧೆ ಕುಂಠಿತಗೊಂಡಿರುವುದು ನಮ್ಮ ಸಂಕಲ್ಪ ಈಡೇರಿಸಲು ಅಡ್ಡಿಯಾಗಿದೆ ಎಂದರು. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾವಣನ ಪ್ರತಿಕ್ರತಿಯ ದಹನದೊಂದಿಗೆ ಸಮಾರೋಪಗೊಂಡಿತು.

ಸಮಾರಂಭದ ವೇದಿಕೆಯಲ್ಲಿ ವಿಎಚ್‌ಪಿ ಪ್ರಾಂತ ಕಾರ್ಯಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ವೇದಮೂರ್ತಿ ಗಿರಿಧರ ಭಟ್, ಸಂಘಟಕರಾದ ಜಗದೀಶ್ ಶೇಣವ, ಜಗದೀಶ್ ಶೆಣೈ, ವಿವೇಕ್ ತಂತ್ರಿ, ಮುರಳೀಧರ್ ಹಂಸತ್ತಡ್ಕ, ಸುನಿಲ್, ವಿನೋದ್ ಶೆಟ್ಟಿ, ಗೋಪಾಲಕೃಷ್ಣ ಶೆಣೈ, ಶಿವಾನಂದ ಮೆಂಡನ್ ಮತ್ತಿತರರಿದ್ದರು. ದಯಾನಂದ ಕಟೀಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News