×
Ad

ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕ್ಯಾಂಪ್

Update: 2019-04-28 21:20 IST

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ವತಿಯಿಂದ ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕಾರ್ಯಗಾರ ಕಾರ್ಯಕ್ರಮ ಎಪ್ರಿಲ್ 27 ರಂದು ಮರ್ಕಝುಲ್ ಹಿದಾಯ ಕ್ಯಾಂಪಸ್ ಕೊಟೇಕಾರ್ ನಲ್ಲಿ ಮಧ್ಯಾಹ್ನ ಡಿವಿಶನ್ ಅಧ್ಯಕ್ಷರಾದ ಖುಬೈಬ್ ತಂಗಳ್ ಉಳ್ಳಾಲರ ಅಧ್ಯಕ್ಶತೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ  ಇಸ್ಮಾಯಿಲ್ ಮಾಸ್ಟರ್  ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಕಾರ್ಯದರ್ಶಿ  ಮುಸ್ತಫಾ ಮಾಸ್ಟರ್ ಹಾಗೂ ನಾಸಿರ್ ಮಾಸ್ಟರ್ ಬಜ್ಪೆಯವರು  ತರಗತಿ  ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಿವಿಶನ್ ವಿಸ್ಡಂ ಕಾರ್ಯದರ್ಶಿ ಶಿಹಾಬುದ್ದೀನ್ ಹಾಗೂ ರೀಡ್ ಪ್ಲಸ್ ಕನ್ವಿನರ್ ಮುಹಮ್ಮದ್ ಅಲ್ತಾಫ್ ಕಲ್ಪಾದೆ, ಮಾಧ್ಯಮ ಕಾರ್ಯದರ್ಶಿ  ಮೊಹಮ್ಮದ್ ಆಶಿಕ್  ಉಪಸ್ಥಿತರಿದ್ದರು

ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ನಾಸಿರ್ ಮಾಸ್ಟರ್ ಅಜ್ಜಿನಡ್ಕ  ಸ್ವಾಗತಿಸಿದರು. ಡಿವಿಶನ್ ಪ್ರ ಕಾರ್ಯದರ್ಶಿ ಹಮೀದ್ ತಲಪಾಡಿ  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News