ರಾಷ್ಟ್ರಿಯ ಆಯುರ್ವೇದ ರಸಪ್ರಶ್ನೆ: ಉಡುಪಿ ಎಸ್‌ಡಿಎಂಗೆ ಪ್ರಶಸ್ತಿ
Update: 2019-04-28 21:59 IST
ಉಡುಪಿ, ಎ.28: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಎ.26ರಂದು ದೂದ ಪಾಪೇಶ್ವರ ವತಿಯಿಂದ ಆಯೋಜಿಸಲಾಗಿದ್ದ ‘ಜ್ಯೋತಿಷ್ಮತಿ -3’ ರಾಷ್ಟ್ರಿಯ ಅಂತರ್ ಕಾಲೇಜು ಆಯುರ್ವೇದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಥಮ ಬಹುಮಾನ ಗೆದ್ದುಕೊಂಡಿದೆ.
ವಿದ್ಯಾರ್ಥಿಗಳಾದ ಪೃಥ್ವಿ ಎನ್ ಭಟ್, ಸಂದೀಪ್ ಎಸ್.ಆಚಾರ್, ಎಸ್. ಸನತ್ ಕುಮಾರ ಹಾಗು ಶುಶ್ಮಿತಾ ಕೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಡೆದ ವಿವೇಕ ಟಾಕ್ಸ್ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಅಧ್ಯಯನ ಕೇಂದ್ರದ ಡೀನ್ ಡಾ.ನಿರಂಜನ್ ರಾವ್, ಕಾಯಚಿಕಿತ್ಸಾ ಮತ್ತು ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಿಶಾಂತ್ ಪೈ ಹಾಗು ಆಸ್ಪತ್ರೆಯ ಕಿರುವೈದ್ಯ ಡಾ.ಅನ್ನಪೂರ್ಣ ಆಚಾರ್ಯ ಉಪನ್ಯಾಸ ನೀಡಿದರು.