×
Ad

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನಿಂದ ಅಸಕ್ತರಿಗೆ ಆರ್ಥಿಕ ನೆರವು

Update: 2019-04-28 22:16 IST

ಮೂಡುಬಿದಿರೆ : ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಸಮಾಜದಲ್ಲಿ ಅಸಕ್ತರಾಗಿರುವ ನಾಲ್ಕು ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ರವಿವಾರ ಪತ್ರಕರ್ತರ ಸಮ್ಮುಖದಲ್ಲಿ ನೀಡಲಾಯಿತು.

ಕಾರ್ಕಳ ತಾಲೂಕಿನ ವಂಜಾರಕಟ್ಟೆ ದಾಸಂದಕಲ್ಲು ಎಂಬಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟ ಗಗನ್ ಹೆತ್ತವರಿಗೆ, ಮೆದುಳು ಮತ್ತು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ ತೋಟತ್ತಾಡಿ ಹರೀಶ್ ಕುಲಾಲ್ ಭವಾನಿ ದಂಪತಿಯ ಮಕ್ಕಳಾದ ಲಾವಣ್ಯ ಮತ್ತು ತನ್ವಿತ್ ಚಿಕಿತ್ಸೆಗೆ, ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರು ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಶೋಭಾ ದಂಪತಿಯ ಪುತ್ರ ಜಯರಾಮ್‍ಗೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿವಂಗತ ರಾಜು ದೇವಾಡಿಗರ ಪುತ್ರ ಪದ್ಮಪ್ರಸಾದ್‍ಗೆ ಸೇರಿದಂತೆ ಒಟ್ಟು ನಾಲ್ಕು ಕುಟುಂಬಗಳಿಗೆ  ತಲಾ 20,000 ಸಾವಿರದಂತೆ ಆರ್ಥಿಕ ನೆರವಿನ ಚೆಕ್ಕನ್ನು ಮೂಡುಬಿದಿರೆ ಪ್ರೆಸ್‍ಕ್ಲಬ್ ಆವರಣದಲ್ಲಿ ವಿತರಿಸಲಾಯಿತು. 

ಮೂಡುಬಿದಿರೆ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ವೇಣುಗೋಪಾಲ್, ನಮ್ಮ ಬೆದ್ರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ, ಪತ್ರಕರ್ತ ಬೆಳುವಾಯಿ ಸೀತಾರಾಮ ಆಚಾರ್ಯ ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News