×
Ad

ಖಲಿ ಪ್ರಚಾರದ ವಿರುದ್ಧ ಚುನಾವಣಾ ಆಯೊಗಕ್ಕೆ ಪತ್ರ

Update: 2019-04-28 23:14 IST

ಕೋಲ್ಕತ್ತಾ, ಎ. 28: ಅಮೆರಿಕ ನಾಗರಿಕ, ಕುಸ್ತಿಪಟು ದಿ ಗ್ರೇಟ್ ಖಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿರುವುದನ್ನು ವಿರೋಧಿಸಿ ತೃಣಮೂಲ ಪಕ್ಷ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಜಾಧವ್‌ಪುರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಅನುಪಮ್ ಹಝಾರೆ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ರ್ಯಾಲಿಯಲ್ಲಿ ಗ್ರೇಟ್ ಖಲಿ ಪಾಲ್ಗೊಂಡರು. ತೆರೆದ ಜೀಪಿನಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಖಲಿಯನ್ನು ನೋಡಲು ಜನರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಖಲಿ ಅವರ ನಿಜ ನಾಮಧೇಯ ದಲೀಪ್ ಸಿಂಗ್ ರಾಣಾ. 2014ರಲ್ಲಿ ಅವರು ಅಮೆರಿಕದ ನಾಗರಿಕತ್ವ ಪಡೆದುಕೊಂಡಿದ್ದರು.

ಬಳಿಕ ಭಾರತದ ಪಾಸ್‌ಪೋರ್ಟ್ ಪಡೆದುಕೊಂಡಿದ್ದರು. ಈ ತಿಂಗಳ ಆರಂಭದಲ್ಲಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ನಡೆಸಲು ಬಾಂಗ್ಲಾದೇಶದ ಜನಪ್ರಿಯ ನಟ ಫಿರ್ದೌಸ್ ಅಹ್ಮದ್ ಆಗಮಿಸಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ದೇಶದಿಂದ ನಿರ್ಗಮಿಸುವಂತೆ ಆದೇಶಿಸಲಾಗಿತ್ತು ಹಾಗೂ ಅವರ ಬ್ಯುಸಿನಸ್ ವೀಸಾ ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News