'ಲಾಲೂಗೆ ಭೀತಿ ಹುಟ್ಟಿಸಿದ ಕನ್ಹಯ್ಯಾ ಜನಪ್ರಿಯತೆ'

Update: 2019-04-30 03:32 GMT
ಕೆ.ಸಿ. ತ್ಯಾಗಿ

ಪಾಟ್ನಾ, ಎ. 30: ಬೆಗುಸರಾಯ್ ಕ್ಷೇತ್ರದ ಸಿಪಿಐ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರ ಜನಪ್ರಿಯತೆ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರಲ್ಲಿ ಭೀತಿ ಹುಟ್ಟಿಸಿದ್ದು, ಈ ಕಾರಣದಿಂದಲೇ ಅವರನ್ನು ಮಹಾಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿಲ್ಲ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಆಪಾದಿಸಿದ್ದಾರೆ.

"ಲಾಲೂ ಅವರನ್ನು ಅಭದ್ರತೆ ಕಾಡುತ್ತಿದ್ದು, ತಮ್ಮ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರಿಗೆ ಸಮಕಾಲೀನ ಮುಖಂಡರಾಗಿ ಯಾರೂ ಬೆಳೆಯುವುದನ್ನು ಅವರು ಬಯಸುವುದಿಲ್ಲ" ಎಂದು ಕೆ.ಸಿ. ತ್ಯಾಗಿ ಅಭಿಪ್ರಾಯಪಟ್ಟಿದ್ದಾರೆ.

"ಟೈಮ್ಸ್ ಆಫ್ ಇಂಡಿಯಾ" ಜತೆ ಮಾತನಾಡಿದ ಅವರು, "ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ಕನ್ಹಯ್ಯಾ ಅವರ ಬಗ್ಗೆ ನಮಗೆ ಅನುಕಂಪವಿದೆ. ರಾಜಕೀಯವಾಗಿ ಅವರು ತೀವ್ರ ವಿಶ್ವಾಸ ದ್ರೋಹಕ್ಕೆ ಒಳಗಾಗಿದ್ದಾರೆ. ಎಡಪಕ್ಷಗಳು ಸದಾ ಲಾಲೂ ಬೆಂಬಲಕ್ಕೆ ನಿಂತಿದ್ದವು. ಆದರೆ ತೇಜಸ್ವಿಯ ಕಿರೀಟ ಉಳಿಸುವ ಸಲುವಾಗಿ ಕನ್ಹಯ್ಯಾ ಅವರನ್ನು ಮಹಾಮೈತ್ರಿಯ ಅಭ್ಯರ್ಥಿಯಾಗಿ ಮಾಡಲಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News