ಕೆ.ಸಿ.ಎಲ್: ಬಿ ಪೂಲ್‍ನಲ್ಲಿ ಮೂರು ತಂಡಗಳ ಮುನ್ನಡೆ

Update: 2019-04-30 11:43 GMT

ಸಿದ್ದಾಪುರ: ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಗ್ರೂಪ್ ಬಿ ಬಿಭಾಗದಲ್ಲಿ ಮೂರು ತಂಡಗಳು ಮುನ್ನಡೆಯನ್ನು ಕಾಯ್ದುಕೊಂಡಿದೆ.
ಗ್ರೂಪ್ ಬಿ ವಿಭಾಗದ ಪಂದ್ಯಾಟದಲ್ಲಿ ವಿರಾಟ್ ಕ್ರಿಕೆಟರ್ಸ್ ಕಳತ್ಮಾಡು ಹಾಗೂ ಝಲ್ಲಾ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡಗಳ ನಡುವಿನ ಪಂದ್ಯಾಟದಲ್ಲಿ ಆರಂಭಿಕ ಬ್ಯಾಟ್ ಮಾಡಿದ ವಿರಾಟ್ ತಂಡ ನಿಗದಿತ 6 ಓವರ್‍ಗಳಲ್ಲಿ 66 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಝಲ್ಲಾ ತಂಡ 57 ರನ್‍ಗಳಿಸಿ ಸೋಲನುಭವಿಸಿತ್ತು.

ಸ್ಪೋಟ್ರ್ಸ್ ವಾಲ್ಡ್ ಮಡಿಕೇರಿ ಹಾಗೂ ಗೀನ್ಸ್ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡದ ನಡುವಿನ ಪಂದ್ಯಾಟದಲ್ಲಿ ಸ್ಪೋಟ್ರ್ಸ್ 6 ಓವರ್‍ಗಳಲ್ಲಿ 51 ರನ್‍ಗಳನ್ನು ಪೇರಿಸಿದರು. ಗುರಿ ಬೆನ್ನಟ್ಟಿದ ಗ್ರೀನ್ಸ್ ತಂಡ ನಿಗದಿತ 6 ಓವರ್‍ಗಳಲ್ಲಿ 37 ರನ್ ಗಳಿಸಲಷ್ಟೆ ಶಕ್ತವಾಯಿತ್ತು.

ಆಶೆಶ್ ಗೋಣಿಕೊಪ್ಪಲು ಹಾಗೂ ಬ್ಲ್ಯಾಕ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಆಶೆಶ್ ತಂಡ ಬ್ಯಾಟಿಂಗ್‍ಗೆ ಇಳಿದು 6 ಓವರ್‍ಗಳಲ್ಲಿ 37 ರನ್ ಗಳಿಸಿದರು. ಗೆಲುವಿಗಾಗಿ ಕಣಕ್ಕಿಳಿದ ಬ್ಲಾಕ್ ವಾರಿಯರ್ಸ್ ಕೇವಲ 3 ಓವರ್‍ನಲ್ಲಿ ಗೆಲುವು ಸಾಧಿಸಿತ್ತು.

ಬ್ಲ್ಯಾಕ್ ತಂಡರ್ಸ್ ಗೋಣಿಕೊಪ್ಪಲು ಹಾಗೂ ವಿರಾಟ್ ಕ್ರಿಕೆಟರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಆರಂಭಿಕ ಬ್ಯಾಟ್ ಬೀಸಿದ ಬ್ಲ್ಯಾಕ್ ತಂಡರ್ಸ್ ತಂಡ ನಿಗದಿತ 6 ಓವರ್‍ಗಳಲ್ಲಿ 47 ರನ್ ಗಳಿಸಿತ್ತು. ಗೆಲುವು ಬೆನ್ನಟ್ಟಿದ ವಿರಾಟ್ ಕ್ರಿಕೆಟರ್ಸ್ ನಿಗದಿತ ಓವರ್‍ಗಳಲ್ಲಿ 41 ರನ್‍ಗಳನ್ನು ಮಾತ್ರ ಪಡೆದು ಸೋಲನ್ನೊಪ್ಪಿಕೊಂಡಿತ್ತು.

ಝಲ್ಲಾ ಕ್ರಿಕೆಟರ್ಸ್ ಹಾಗೂ ಬ್ಲ್ಯಾಕ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಬ್ಯಾಟಿಂಗ್ ಗೆ ಇಳಿದ ಝಲ್ಲಾ ತಂಡ 6 ಓವರ್‍ಗಳಲ್ಲಿ 53 ರನ್‍ಗಳನ್ನು ಗಳಿಸಿತ್ತು. ಬ್ಲ್ಯಾಕ್ ವಾರಿಯರ್ಸ್ ತಂಡ 41 ರನ್‍ಗಳಿಸಿ ಸೋಲನ್ನನುಭವಿಸಿತ್ತು.

ಗ್ರೀನ್ ಕ್ರಿಕೆಟರ್ಸ್ ಹಾಗೂ ಆಶಶ್ ಗೋಣಿಕೊಪ್ಪ ತಂಡಗಳ ನಡುವಿನ ಕಾದಾಟದಲ್ಲಿ 6 ಓವರ್‍ಗಳಲ್ಲಿ ಗ್ರೀನ್ಸ್ ತಂಡ 36 ರನ್‍ಗಳನ್ನು ಗಳಿಸಿತ್ತು. ಗೆಲುವಿಗಾಗಿ ಕಣಕ್ಕಿಳಿದ ಆಶಶ್ ತಂಡ 5.1 ಓವರ್‍ಗಳಲ್ಲಿ 38 ರನ್ ಗಳಿಸಿ ಗೆಲುವಿನ ದಡ ಸೇರಿತ್ತು.

ಸ್ಪೋಟ್ರ್ಸ್ ವಾಲ್ಡ್ ಹಾಗೂ ಬ್ಲ್ಯಾಕ್ ತಂಡರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಸ್ಪೋಟ್ರ್ಸ್ ವಾಲ್ಡ್ ಆರಂಭಿಕ ಬ್ಯಾಟ್ ನಡೆಸಿ 6 ಓವರ್‍ಗಳಲ್ಲಿ 49 ರನ್‍ಗಳನ್ನು ಗಳಿಸಿದರು. 50 ರನ್‍ಗಳ ಗುರಿ ಬೆನ್ನಟ್ಟಿದ ಬ್ಲ್ಯಾಕ್ ತಂಡರ್ಸ್ ನಿಗದಿತ ಓವರ್‍ಗಳಲ್ಲಿ 43 ರನ್‍ಗಳಿಸಿ ಸೋಲನುಭವಿಸಿತ್ತು.

ಬ್ಲ್ಯಾಕ್ ವಾರಿಯರ್ಸ್ ಹಾಗೂ ವಿರಾಟ್ ಕ್ರಿಕೆಟರ್ಸ್ ನಡುವಿನ ಪಂದ್ಯಾಟದಲ್ಲಿ ಆರಂಬಿಕ ಬ್ಯಾಟ್ ಬೀಸಿದ ಬ್ಲ್ಯಾಕ್ ವಾರಿಯರ್ಸ್ ತಂಡ 6 ಓವರ್‍ಗಳಲ್ಲಿ 46 ರನ್ ಗಳಿಸಿದರು. 47 ರನ್ ಗುರಿ ಬೆನ್ನಟ್ಟಿದ 4 ವಿಕೆಟ್ ನಷ್ಟಕ್ಕೆ ನಿಗದಿತ ಓವರ್‍ನಲ್ಲಿ 27 ರನ್ ಗಳಿಸಿತ್ತು.

ಆಶಶ್ ಗೋಣಿಕೊಪ್ಪಲು ಹಾಗೂ ಝಲ್ಲಾ ಕ್ರಿಕೆಟರ್ಸ್ ನಡುವಿನ ಪಂದ್ಯಾಟದಲ್ಲಿ ಆಶಶ್ 29 ರನ್ ಗಳಿಸಿತ್ತು.  ಸುಲಭ ಗುರಿ ಬೆನ್ನಟ್ಟಿದ ಝಲ್ಲಾ ತಂಡದ ನಾಯಕ ಅಕ್ಷಯ್ ಉಣ್ಣಿ ರವರ ಅಮೋಘ 27 ರನ್‍ಗಳ ಸಹಾಯದಿಂದ 1.5 ಓವರ್‍ಗಳಲ್ಲಿ ಗೆಲುವು ಸಾಧಿಸಿತ್ತು.

ಗ್ರೂಪ್ ಬಿ ನ ಪಂದ್ಯಾಟಗಳು ಮೇ.1 ರಂದು ಕೂಡ ನಡೆಯಲಿದ್ದು, ಕೆ.ಸಿ.ಎಲ್ ಪ್ಲೇ ಆಫ್ ಮೇ.2 ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News