ಆತೂರು ಬದ್ರಿಯಾ ಶರೀಅತ್ತ್ ಕಾಲೇಜು ಪ್ರವೇಶ ಪತ್ರ ಬಿಡುಗಡೆ ಸಮಾರಂಭ

Update: 2019-04-30 14:56 GMT

ಉಪ್ಪಿನಂಗಡಿ: ಮನೆಯೊಳಗಿನ ಓರ್ವ ಹೆಣ್ಣು ಮಗಳು ಶಿಕ್ಷಿತಳಾದರೆ, ಆಕೆಯ ಕುಟುಂಬ, ಪುರುಷ ಸಮೂಹವೇ ಶಿಕ್ಷಿತರಾದಂತೆ ಎಂದು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ಹೇಳಿದರು.

ಅವರು ಎ. 29ರಂದು ಆತೂರು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಆತೂರು ಬದ್ರಿಯಾ ಶರೀಅತ್ತ್ ಕಾಲೇಜು ಇದರ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಹೆಣ್ಣು ಮಗಳು ಶಿಕ್ಷಿತರರಾಗಿ ಮುಂದೆ ಬಂದರೆ ಮುಸ್ಲಿಂ ಕುಟುಂಬಗಳಲ್ಲಿ ಕಾಡುವ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಸಂಸ್ಕಾಯುತ ಶಿಕ್ಷಣ ಕೊಡಿಸುವುದು ಅತೀ ಅಗತ್ಯವಾಗಿದ್ದು, ಉಲೆಮಾ, ಉಮರಾಗಳು ಇದರ ಮಹತ್ವ ಅರಿತು ಸಹಕಾರಿಗಳಾಗಬೇಕು ಎಂದರು.

 ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ ನಮ್ಮ ಹೆಣ್ಣು ಮಕ್ಕಳಿಗೆ ದೀನೀ ಬೋಧನೆಯ ಸಂಸ್ಕಾರಯುತ ಶಿಕ್ಷಣ ನೀಡಬೇಕಾದುದು ಅತೀ ಅಗತ್ಯವಾಗಿದ್ದು, ಇಲ್ಲಿ ಇದಕ್ಕಾಗಿ ಎಲ್ಲಾ ಮೂಲ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ಸಯ್ಯದ್ ಅನಸ್ ತಂಙಳ್ ದುವಾಃ ನೆರವೇರಿಸಿದರು. ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುರ್ಷಿದ್ ಫೈಝಿ ಸಂದರ್ಭೋಚಿತವಾಗಿ ಮಾತನಾಡಿದರು.

ಕುಂಡಾಜೆ ಮಸೀದಿ ಖತೀಬ್ ಮುನೀರ್ ಅನ್ವರಿ, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ. ಅಬ್ದುಲ್ ರಜಾಕ್, ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹೈದರ್, ಕುಂಡಾಜೆ ಮಸೀದಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಬದ್ರಿಯಾ ಸ್ಕೂಲ್ ಸಮಿತಿ ಅಧ್ಯಕ್ಷ ಆದಂ ಹಾಜಿ ಪಿಲಿಕೂಡೆಲು, ಉಪಾಧ್ಯಕ್ಷ ಪೊಡಿಕುಂಞï ನೀರಾಜೆ, ಬಿ.ಆರ್. ಅಬ್ದುಲ್ ಖಾದರ್, ಆತೂರುಬೈಲ್ ಮದ್ರಸ ಅಧ್ಯಕ್ಷ ಖಲೀಲ್, ನೀರಾಜೆ ಮದ್ರಸ ಅಧ್ಯಕ್ಷ ಯೂಸುಫ್ ನೀರಾಜೆ, ನೆಕ್ಕರೆ ಮಸೀದಿ ಅಧ್ಯಕ್ಷ ಅಬ್ದುಲ್ಲ ಕುಂಞï, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎ. ಸುಲೈಮಾನ್, ಹೆಚ್. ಅಬ್ದುಲ್ ರಹಿಮಾನ್, ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಅಬ್ದುಲ್ ಹಮೀದ್ ದಾರಿಮಿ, ಝಕರಿಯಾ ಮುಸ್ಲಿಯಾರ್, ಸ್ಥಳೀಯ ಪ್ರಮುಖರಾದ ಅಯ್ಯೂಬ್ ಹಾಜಿ, ಮಹಮ್ಮದ್ ಹಾಜಿ ಉಪಸ್ಥಿತರಿದ್ದರು.

ಬದ್ರಿಯಾ ಸ್ಕೂಲ್ ಮುಖ್ಯ ಶಿಕ್ಷಕ ಹಂಝ ಸಖಾಫಿ ಸ್ವಾಗತಿಸಿ, ಮಸೀದಿ ಕಾರ್ಯದರ್ಶಿ ಸಿರಾಜುದ್ದೀನ್ ಬಡ್ಡಮೆ ವಂದಿಸಿದರು. ಆತೂರು ಮಸೀದಿ ಸದರ್ ಮುಅಲ್ಲಿಂ ಸಿದ್ದಿಕ್ ಫೈಝಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News