×
Ad

ಅಡ್ಡೂರು : ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‌ಗೆ ಆಯ್ಕೆ

Update: 2019-04-30 20:56 IST

ಮಂಗಳೂರು, ಎ.30: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್  ಹಾಗೂ ಸಹರಾ ಆಂಗ್ಲ ಮಾಧ್ಯಮ ಶಾಲೆಯ ಮಹಾಸಭೆಯು ಹಾಜಿ ಎಂ.ಎಚ್.ಮುಹಿಯ್ಯುದ್ದೀನ್‌ರ ಅಧ್ಯಕ್ಷತೆಯಲ್ಲಿ ಅಡ್ಡೂರಿನ ಸಹರಾ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು.

ಈ ಸಂದರ್ಭ ಅಸೋಸಿಯೇಶನ್ ಅಧ್ಯಕ್ಷರಾಗಿ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ ಏಳನೇ ಬಾರಿ ಅವಿರೋಧ ಆಯ್ಕೆಯಾದರು. ಸಮಿತಿಯ ಉಪಾಧ್ಯಕ್ಷರಾಗಿ ಅಹ್ಮದ್ ಬಾವ ಅಂಗಡಿಮನೆ ಮತ್ತು ಎನ್.ಇ.ಮುಹಮ್ಮದ್, ಕಾರ್ಯದರ್ಶಿಯಾಗಿ ಯು.ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿಯಾಗಿ ನೂರುಲ್ ಅಮೀನ್, ಕೋಶಾಧಿಕಾರಿಯಾಗಿ ಎನ್.ಇಸ್ಮಾಯೀಲ್, ಲೆಕ್ಕಪರಿಶೋಧಕರಾಗಿ ಜಿ. ಪಿ.ಮುಹಮ್ಮದ್, ಶಾಲಾ ಸಂಚಾಲಕರಾಗಿ ಎ.ಕೆ. ಇಸ್ಮಾಯೀಲ್, ಗೌರವಾಧ್ಯಕ್ಷರಾಗಿ ಹಾಜಿ ಎಂ.ಎಚ್. ಮುಹಿಯ್ಯುದ್ದೀನ್ ಆಯ್ಕೆಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ.ಕೆ.ಮುಹಮ್ಮದ್, ಎ.ಕೆ. ಅಶ್ರಫ್, ಡಿ.ಎಸ್. ರಫೀಕ್, ಅಬ್ದುಲ್ ಅಝೀಝ್ ಅಂಗಡಿಮನೆ, ಎ.ಜಿ. ಅಬ್ದುಲ್ ಖಾದರ್, ಖಾಸಿಂ ಪ್ಯಾರಾ, ಅಬ್ಬಾಸ್ ಕೆಳಗಿನಕರೆ, ಅಬ್ದುಲ್ ಜಬ್ಬಾರ್ ಕೆಳಗಿನಕರೆ,ಸುಲೈಮಾನ್ ಕೆಳಗಿನಕರೆ, ಎ.ಜಿ.ಮುಹಮ್ಮದ್, ಡಿ.ಎಸ್. ಅಬ್ದುಲ್ ರಹೀಂ, ಡಾ.ಸಿದ್ದೀಕ್ ಅವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News