ಕಣ್ಣೂರು ಆಂಗ್ಲಮಾಧ್ಯಮ ಪ್ರೌಢ ಶಾಲೆಗೆ ಶೇ. 97 ಫಲಿತಾಂಶ: ಆಯಿಶಾ ನಾಫಿಯಾಗೆ 561 ಅಂಕ
ಮಂಗಳೂರು, ಎ. 30: ಕಣ್ಣೂರು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಕಣ್ಣೂರು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 97% ಫಲಿತಾಂಶ ಪಡೆದಿದೆ.
ಒಟ್ಟು ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 4 ಮಂದಿ ವಿಶಿಷ್ಟ ಶ್ರೇಣಿ ಮತ್ತು 18 ಪ್ರಥಮ ಶ್ರೇಣಿ ಪಡೆದಿರುತ್ತಾರೆ. ಹತ್ತನೇ ತರಗತಿ ವಿದ್ಯಾರ್ಥಿನಿ ಆಯಿಶಾ ನಾಫಿಯಾ 561 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇವರು ಕಣ್ಣೂರು ನಿವಾಸಿಗಳಾದ ಯೂಸುಫ್ ಮತ್ತು ಫರ್ಝಾನ ದಂಪತಿಯ ಪುತ್ರಿ.
ಸದರಿ ಶಿಕ್ಷಣ ಸಂಸ್ಥೆಯ ಪಿ.ಯು ಕಾಲೇಜು ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಪಿ ಯು ವಾಣಿಜ್ಯ ವಿಭಾಗದಲ್ಲಿ ಅಫ್ರೀನಾ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಸಂಸ್ಥೆಯಲ್ಲಿ ಇಸ್ಲಾಮಿಕ್ ಸ್ಟಡೀಸ್ ನೊಂದಿಗೆ ಪಿಯುಸಿ ವಿಭಾಗವಿದ್ದು, ಎಸ್.ಎಸ್.ಎಲ್.ಸಿ ಯಲ್ಲಿ 85% ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶುಲ್ಕದಲ್ಲಿ 50% ರಿಯಾಯಿತಿ ನೀಡಲಾಗುವುದು. ಆದುದರಿಂದ ಅರ್ಹ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಿಯುಸಿಗೆ ಪ್ರವೇಶ ಪಡೆಯುವಂತೆ ಸಂಸ್ಥೆಯ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.