×
Ad

ಉಳ್ಳಾಲ: ತೆರೆದ ಬಾವಿ ನಿರ್ಮಾಣ ಕಾಮಗಾರಿಗೆ ಚಾಲನೆ

Update: 2019-04-30 21:09 IST

ಮಂಗಳೂರು, ಎ.30: ಉಳ್ಳಾಲದ ಮಿಲ್ಲತ್‌ನಗರ ಮಸೀದಿ ಮತ್ತು ಪರಿಸರದ ನಿವಾಸಿಗಳ ಉಪಯೋಗಕ್ಕಾಗಿ ದಾನಿಯೋರ್ವರ ನೆರವಿನಿಂದ ನಿರ್ಮಣವಾಗಲಿರುವ ತೆರೆದ ಬಾವಿ ಕಾಮಗಾರಿಗೆ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನೀರಿನ ಸಮಸ್ಯೆ ಪರಿಹಾರಕ್ಕಾಗಿ ದರ್ಗಾದ ಮಾಜಿ ಸದಸ್ಯ ಕಬೀರ್ ಚಾಯಬ್ಬ ಅವರ ಪ್ರಯತ್ನದ ಫಲವಾಗಿ ಬೆಂಗಳೂರಿನ ದಾನಿಗಳು ಬಾವಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರ್ಯಕ್ಕೆ ಅಲ್ಲಾಹನು ತಕ್ಕ ಪ್ರತಿಫಲ ನೀಡಲಿ ಎಂದು ಹಾರೈಸಿದರು.

ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುಆಗೈದರು. ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಸಮಾಜ ಸೇವಕ ಕಬೀರ್ ಚಾಯಬ್ಬ, ಉಳ್ಳಾಲ ದರ್ಗಾ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಕೌನ್ಸಿಲರ್ ಯು.ಎಂ.ಜಬ್ಬಾರ್, ಉಳ್ಳಾಲ ದರ್ಗಾ ಜೊತೆ ಕಾರ್ಯದರ್ಶಿ ನೌಷಾದ್ ಅಬೂಬಕ್ಕರ್, ಉಳ್ಳಾಲ ಅರಬಿಕ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಶಿಫ್ ಅಬ್ದುಲ್ಲ, ದರ್ಗಾ ಸದಸ್ಯರಾದ ಉದ್ಯಮಿ ಅಲಿಮೋನು, ಯು.ಕೆ.ಯುಸೂಫ್ ಉಳ್ಳಾಲ್, ಅದ್ದ ಕೋಟೆಪುರ, ಹಮ್ಮಬ್ಬ ಕೋಟೆಪುರ, ಎಸ್. ಡಿ. ಪಿ.ಐ. ಮುಖಂಡ ನಿಝಾಮ್ ಮೇಲಂಗಡಿ, ಉಳ್ಳಾಲ ಸೈಯದ್ ಇಬ್ರಾಹೀಂ ತಂಙಳ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅದ್ದಾಮ, ಗುತ್ತಿಗೆದಾರ ಮುಹಮ್ಮದ್ ಮೇಸ್ತ್ರಿ, ಹೊಸಪಳ್ಳಿ ಸದಸ್ಯರಾದ ಕಬೀರ್ ಬುಖಾರಿ, ಹಸೈನಾರ್ ಜಿ.ಎಂ.ಹೌಸ್, ಇಬ್ರಾಹೀಂ ಕಲ್ಲಾನ, ಖಾದರ್ ಮಿಲ್ಲತ್‌ನಗರ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News