×
Ad

ಅತ್ಯಾಚಾರ ಪ್ರಕರಣ: ಆಸಾರಾಂ ಪುತ್ರನಿಗೆ ಜೀವಾವಧಿ

Update: 2019-04-30 22:11 IST

ಹೊಸದಿಲ್ಲಿ,ಎ.30: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆಸಾರಾಂ ಪುತ್ರ ನಾರಾಯಣ ಸಾಯಿಗೆ ಗುಜರಾತ್‌ನ ಸೂರತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತನ್ನ ತಂದೆಯ ಶಿಷ್ಯೆಯಾಗಿದ್ದ ಸೂರತ್ ಮೂಲದ ಮಹಿಳೆಯನ್ನು ಅತ್ಯಾಚಾರಗೈದ ಆರೋಪದಲ್ಲಿ ನಾರಾಯಣ ಸಾಯಿಯನ್ನು 2013ರಲ್ಲಿ ಬಂಧಿಸಲಾಗಿತ್ತು. ಆಸಾರಾಂನ ಆಶ್ರಮದಲ್ಲಿ ನೆಲೆಸಿದ್ದಾಗ ನಾರಾಯಣ ಸಾಯಿ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದರು. ನಂತರ ಪೊಲೀಸರು ಸಾಯಿಯನ್ನು ಹರ್ಯಾಣದ ಪಿಪ್ಲಿಯಿಂದ ಬಂಧಿಸಿದ್ದರು.

2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್‌ಪುರ ನ್ಯಾಯಾಲಯ ಆಸಾರಾಂ ಮತ್ತು ಆತನ ಇಬ್ಬರು ಸಹಚರರು ಅಪರಾಧಿಗಳು ಎಂದು ತೀರ್ಪು ನೀಡಿದೆ. ಸದ್ಯ ಆಸಾರಾಂ ಜೋಧ್‌ಪುರ ಕೇಂದ್ರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News