×
Ad

ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ: ಜಿಲ್ಲಾಧಿಕಾರಿ ಕೊರ್ಲಪಾಟಿ

Update: 2019-04-30 22:33 IST

ಉಡುಪಿ, ಎ.30: ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿ ಮತ್ತು ದೊಡ್ಡ ಚಿಂತನೆ ಹೊಂದಿರಬೇಕು. ಉತ್ತಮ ಸಾಧನೆಯೇ ಧ್ಯೇಯವಾಗಬೇಕು. ಅದಕ್ಕಾಗಿ ನಿರಂತರ ಪರಿಶ್ರಮ ಪಡಬೇಕು. ಅದರ ಫಲವಾಗಿ ಸಾಧನೆ ಮಾಡಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಭಾರಾಣಿ ಕೊರ್ಲಪಾಟಿ ಹೇಳಿದ್ದಾರೆ.

ಉಡುಪಿ ನೇತ್ರಜ್ಯೊತಿ ಕಾಲೇಜ್ ಆಫ್ ಆಫ್ಟಮೆಟ್ರಿ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸ್‌ನ ವಾರ್ಷಿಕ ದಿನಾಚರಣೆಯನ್ನು ಎ.29ರಂದು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ-ಕರಾವಳಿಯ ಅಧ್ಯಕ್ಷ ಡಾ.ಗುರುಮೂರ್ತಿ ಭಟ್, ನೇತ್ರತಜ್ಞ ಡಾ. ಚಿನ್ನಪ್ಪಎ.ಜಿ, ನಿರ್ದೇಶಕ ಡಾ.ಕಷ್ಣಪ್ರಸಾದ್ ಕೂಡ್ಲು, ವೀಣಾ ರಾವ್, ರಶ್ಮಿ ಕಷ್ಣಪ್ರಸಾದ್ ಭಾಗವಹಿಸಿದ್ದರು.

ಕಾಲೇಜಿನ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಖಾದರ್, ಪ್ರಸಾದ್ ನೇತ್ರಾ ಲಯದ ಆಡಳಿತಾಧಿಕಾರಿ ಎಂ.ವಿ.ಆಚಾರ್ಯ, ಪ್ರೊ.ಗಿರಿಧರ್ ಕಂಠಿ ಉಪಸ್ಥಿ ತರಿದ್ದರು. ಪ್ರಾಂಶುಪಾಲ ರಾಜೀಬ್ ಮಂಡಲ್ ವಾರ್ಷಿಕ ವರದಿ ವಾಚಿಸಿ ದರು. ವಿದ್ಯಾರ್ಥಿನಿ ರಮ್ಯ ಸ್ವಾಗತಿಸಿದರು.

ಮಾಲತಿ ವಂದಿಸಿದರು . ಶಿಫಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News