ಮೇ 2ರಂದು ಅಭಿನಂದನಾ ಸಮಾರಂಭ
Update: 2019-04-30 22:41 IST
ಉಡುಪಿ, ಎ.30: ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ ಆಯ್ಕೆಗೊಳ್ಳಲಿರುವ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಅಭಿ ನಂದನಾ ಸಮಾರಂಭವನ್ನು ಉಡುಪಿಯ ಹೋಟೇಲ್ ಡಯಾನ ಸಭಾಂಗಣ ದಲ್ಲಿ ಮೇ 2ರಂದು ಅಪರಾಹ್ನ 12:30ಕ್ಕೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.