ವಿದ್ಯಾರ್ಥಿನಿಯ ಸರ ಅಪಹರಣ

Update: 2019-04-30 17:19 GMT

ಕೊಲ್ಲೂರು, ಎ.30: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿ ಯೊಬ್ಬಳ ಕತ್ತಿನಲ್ಲಿದ್ದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಎಳೆದು ಪರಾರಿಯಾಗಿರುವ ಘಟನೆ ಎ.29ರಂದು ಮಧ್ಯಾಹ್ನ 1:45ರ ಸುಮಾರಿಗೆ ನಡೆದಿದೆ.

 ಕೊಲ್ಲೂರು ಹಳ್ಳಬೇರು ನಿವಾವಿ ಪುಟ್ಟು ಎಂಬವರ ಮಗಳು ವನಿತಾ ಮರಾಠಿ(19) ಎಂಬಾಕೆ ಕಾಲೇಜಿನಿಂದ ಬಸ್ಸಿನಲ್ಲಿ ಬಂದು ಮನೆ ಕಡೆ ನಡೆದು ಕೊಂಡು ಹೋಗುತ್ತಿದ್ದಾಗ ಕಾಡು ಪ್ರದೇಶದಲ್ಲಿ ಹಳ್ಳಿಬೇರು ಕಡೆಯಿಂದ ಬೈಕಿನಲ್ಲಿ ಸಮಾರು 25 ವರ್ಷ ಪ್ರಾಯದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದರು. ಅವರಲ್ಲಿ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಬಲಾತ್ಕಾರವಾಗಿ ವನಿತಾಳ ಕುತ್ತಿಗೆಗೆ ಕೈ ಹಾಕಿ 36ಸಾವಿರ ರೂ. ಮೌಲ್ಯದ ಒಂದೂವರೆ ಪವನ್‌ನ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News