ತಿಂಗಳಿನಿಂದ ಹೊಟೇಲ್ ಕಾರ್ಮಿಕ ನಾಪತ್ತೆ
Update: 2019-04-30 22:52 IST
ಕೋಟ, ಎ.30: ಹೊಟೇಲ್ ಕಾರ್ಮಿಕರೊಬ್ಬರು ಕಳೆದ ಒಂದು ತಿಂಗಳು ಗಳಿಂದ ನಾಪತ್ತೆಯಾಗಿರುವ ಘಟನೆ ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಜಪ್ತಿ ಗ್ರಾಮದ ಜನತಾ ಕಾಲೊನಿಯ ಸತೀಶ ಕೊಠಾರಿ(38) ಎಂದು ಗುರುತಿಸಲಾಗಿದೆ. ಇವರು ಎರಡು ತಿಂಗಳ ಹಿಂದೆ ಸಾಲಿಗ್ರಾಮದ ಗಣೇಶ್ ಗ್ರಾಂಡ್ ಹೋಟೆಲ್ನಲ್ಲಿ ಕೆಲಸಕ್ಕೆಂದು ಹೋಗಿದ್ದು ಮಾ.15ರಂದು ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದ ಸತೀಶ್ ಮನೆಗೆ ಬಂದಿರುವುದಿಲ್ಲ.
ಈ ಬಗ್ಗೆ ಇಂದು ಹೊಟೇಲ್‌ನಲ್ಲಿ ವಿಚಾರಿಸಿದಾಗ ಸತೀಶ್ ಮಾರ್ಚ್ ತಿಂಗಳಲ್ಲಿ 3 ದಿನ ಕೆಲಸ ಮಾಡಿ ಹೋದವರು ವಾಪಾಸು ಬಂದಿಲ್ಲ ಎಂದು ಮಾಲಕರು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.