×
Ad

ಯಕ್ಷ ಕಲಾವಿದ ಜಯಕುಮಾರ್ ಜೈನ್ ನಿಧನ

Update: 2019-04-30 22:59 IST

ಉಡುಪಿ, ಎ.30: ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಜಯಕುಮಾರ್ ಜೈನ್ (65) ಅಸೌಖ್ಯದಿಂದ ಸೋಮವಾರ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಂಜದಕಟ್ಟೆ, ಹಿರಿಯಡ್ಕ, ಬೊಂಬ್ಲಾಪುರ, ಮುಲ್ಕಿ, ಬಚ್ಚಗಾರು, ಸಾಲಿಗ್ರಾಮ, ಹೆರ್ಮನಬೈಲು ಮೇಳಗಳಲ್ಲಿ ಸುಮಾರು 4 ದಶಕಗಳ ಕಲಾಸೇವೆ ಮಾಡಿದ್ದ ಜಯಕುಮಾರ್, ಹೆಬ್ಬೈಲು ದೇವಿ ಮಹಾತ್ಮೆ, ಮಹಾಸತಿ ಮನೋರಮೆ ಪ್ರಸಂಗಗಳನ್ನು ಬರೆದು ಪ್ರಸಂಗಕರ್ತರಾಗಿಯೂ ಗುರುತಿಸಿಕೊಂಡಿದ್ದರು.

ವಿಲಕ್ಷಣ, ಅಕ್ರೂರ, ಸಂಜಯ, ಕಾಶಿಮಾಣಿ, ವಿಜಯ, ವಿದ್ಯುಜಿಹ್ವ ಮೊದಲಾದ ಪಾತ್ರಗಳ ಮೂಲಕ ಕಲಾರಸಿಕರ ಮೆಚ್ಚುಗೆ ಪಡೆದಿದ್ದ ಇವರು, ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಜಯಕುಮಾರ್ ಜೈನ್ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News