ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ: 100% ಫಲಿತಾಂಶ
Update: 2019-04-30 23:21 IST
ಮೂಡುಬಿದಿರೆ: ಈ ಬಾರಿಯ ಎಸ್.ಎಸ್.ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಶೇಕಡಾ 100 ಫಲಿತಾಂಶವನ್ನು ಗಳಿಸಿದೆ. ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 37 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶ್ರೀನಿಧಿ ಸೋಮಯಾಜಿ 615 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ನಾಲ್ಕು ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕವನ್ನು ಗಳಿಸಿದ್ದಾರೆ (ಪ್ರಜ್ವಲ್- ಎಮ್.ದಿಂಡಿಗಟ್ಟಿ,-611, ಸಂತೋಷ್ ಹೆಚ್. ಜಿ-602, ಶ್ರೀನಿಧಿ ಎಸ್ ದೇವಾಡಿಗ-601). ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್ ಶೆಟ್ಟಿ ಇವರು ಅಭಿನಂದಿಸಿದ್ದಾರೆ.