ಎಸೆಸೆಲ್ಸಿ ಫಲಿತಾಂಶ: ಮಿತ್ತೂರು ದಾರುಲ್ ಇರ್ಶಾದ್ ಗೆ 100 ಶೇ. ಫಲಿತಾಂಶ
Update: 2019-04-30 23:44 IST
ಮಾಣಿ, ಎ.30: ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು 2018-19ನೇ ಸಾಲಿನ ಎಸೆಸೆಲ್ಸಿ ಪರೀಕ್ಷಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ.
ಮುಹಮ್ಮದ್ ಮಿದ್‌ಲಾಜ್ ಅಳಕೆಮಜಲು ಮೂರು ವರ್ಷಗಳಲ್ಲಿ ಕುರ್‌ಆನ್ ಸಂಪೂರ್ಣ ಕಂಠಪಾಠ ಮಾಡುವುದರೊಂದಿಗೆ ಎಸೆಸೆಲ್ಸಿಯಲ್ಲಿ 548 ಅಂಕಗಳನ್ನು ಗಳಿಸಿ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಉಳಿದಂತೆ ಇಬ್ರಾಹೀಂ ನಾಝಿಮ್ ಕೊಡುಂಗೈ 538 ಅಂಕ, ಮುಹಮ್ಮದ್ ಶಹೀರ್ ವಿಟ್ಲ 536 ಅಂಕಗಳನ್ನು ಗಳಿಸಿದ್ದಾರೆ.
ಒಟ್ಟು 48 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲೂ ಉಳಿದ ಎಲ್ಲಾ ವಿದ್ಯಾರ್ಥಿಗಳ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.