​ದೇಶ ರಕ್ಷಿಸುವ ಹೊಣೆ ಹೊತ್ತವರಿಂದಲೇ ಅರಾಜಕತೆ ಸೃಷ್ಟಿ: ಜಯಾ ಬಚ್ಚನ್

Update: 2019-05-01 03:35 GMT

ಲಕ್ನೋ, ಮೇ 1: ದೇಶವನ್ನು ರಕ್ಷಿಸುವ ಹೊಣೆ ಹೊತ್ತವರೇ ದೇಶದಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಹೇಳಿದ್ದು, ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಲಕ್ನೋದಲ್ಲಿ ಪಕ್ಷದ ಅಭ್ಯರ್ಥಿ ಪೂನಂ ಸಿನ್ಹಾ ಪರ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, "ಪ್ರಸ್ತುತ ಸನ್ನಿವೇಶದಲ್ಲಿ ದೇಶವನ್ನು ರಕ್ಷಿಸಬೇಕಾದವರೇ ಅರಾಜಕತೆ ಹಾಗೂ ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.

"ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಪಡೆದಿರುವ ಪೂನಂ ಅವರವನ್ನು ಆತ್ಮೀಯವಾಗಿ ಸ್ವಾಗತಿಸಿ" ಎಂದು ಬಚ್ಚನ್ ಕರೆ ನೀಡಿದರು.
"ಹೊಸ ಅಭ್ಯರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದು ಸಮಾಜವಾದಿ ಪಕ್ಷದ ಸಂಪ್ರದಾಯ. ನಾವು ಸದಾ ಅವರನ್ನು ಸ್ವಾಗತಿಸಿ, ಅವರ ಜಯ ಖಾತರಿಪಡಿಸುತ್ತೇವೆ. ಅವರು ಎಲ್ಲಿಂದಲೇ ಬಂದಿದ್ದರೂ, ಸಮಾಜವಾದಿ ಪಕ್ಷದ ಭಾಗವಾದ ಅವರನ್ನು ರಕ್ಷಿಸುತ್ತೇವೆ" ಎಂದು ಹೇಳಿದರು.

"ನೀವೆಲ್ಲರೂ ನನಗೆ ಪೂನಂ ಜಯದ ಆಶ್ವಾಸನೆ ನೀಡಿ. ಇಲ್ಲದಿದ್ದರೆ ಆಕೆ ನನಗೆ ಮುಂಬೈ ಪ್ರವೇಶಿಸಲು ಅವಕಾಶ ಕೊಡುವುದಿಲ್ಲ. ಆಕೆ 40 ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತೆ" ಎಂದು ಎಸ್ಪಿ ನಾಯಕಿ ಬಣ್ಣಿಸಿದರು.

ಎ. 16ರಂದು ಎಸ್ಪಿ ಸೇರಿರುವ ಪೂನಂ ಸಿನ್ಹಾ, ಲಕ್ನೋದಲ್ಲಿ ರಾಜನಾಥ್ ಸಿಂಗ್ ವಿರುದ್ಧ ಸೆಣೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News