ಬ್ರದರ್ ಹುಡ್ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಡೊನಾಲ್ಡ್ ಟ್ರಂಪ್ ಸಜ್ಜು

Update: 2019-05-01 06:36 GMT

ವಾಷಿಂಗ್ಟನ್,ಮೇ.1: ಈಜಿಪ್ಟ್ ನ ಅತ್ಯಂತ ಹಿರಿಯ ಇಸ್ಲಾಮಿಕ್ ಆಂದೋಲನ ಮುಸ್ಲಿಂ ಬ್ರದರ್ ಹುಡ್‍ನ್ನು ಭಯೋತ್ಪಾದಕ ಸಂಘಟನೆಯಾಗಿ ಘೋಷಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧವಾಗಿದೆ. ಟ್ರಂಪ್‍ರ ತೀರ್ಮಾನವನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕಾರ್ಯದರ್ಶಿ ಮೈಕ್ ಪೊಂಪಿಯೊ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಬೆಂಬಲಿಸಿದ್ದಾರೆ. ಆದರೆ ಪೆಂಟಗನ್, ರಾಷ್ಟ್ರೀಯ ರಕ್ಷಣಾ ಅಧಿಕಾರಿಗಳು , ಸರಕಾರದ ವಕೀಲರು, ರಾಜತಾಂತ್ರಿಕ ಅಧಿಕಾರಿಗಳು ಕಾನೂನು ಮತ್ತು ನೀತಿಗೆ ಸಂಬಂಧಿಸಿದ ಅಡಚಣೆಗಳಿವೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ಎಪ್ರಿಲ್‍ನಲ್ಲಿ ಅಮೆರಿಕ ಸಂದರ್ಶನದ ವೇಳೆ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‍ಸಿಸಿ ಬ್ರದರ್ ಹುಡ್‍ ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಟ್ರಂಪ್‍ರನ್ನುಆಗ್ರಹಿಸಿದ್ದರು. ಈಗ ಅಮೆರಿಕ ಸಿಸಿಯ ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುತ್ತಿದೆ. ಬ್ರದರ್ ಹುಡ್ ಅಥವಾ ಇಕ್ವಾನುಲ್ ಮುಸ್ಲಿಮೂನನ್ನು 1928ರಲ್ಲಿ ಸ್ಥಾಪಿಸಲಾಗಿತ್ತು. ದೇಶದಲ್ಲಿ ನಡೆದ ಮೊದಲ ಪ್ರಜಾಪ್ರಭುತ್ವ ಪರವಾದ ಚುನಾವಣೆಯಲ್ಲಿ ಈಜಿಪ್ಟ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬ್ರದರ್ ಹುಡ್ ನೇತಾರ ಮುಹಮ್ಮದ್ ಮುರ್ಸಿಯವರನ್ನು 2013ರಲ್ಲಿ ಸೇನಾ ಬುಡಮೇಲು ಕೃತ್ಯದ ಮೂಲಕ ಅಲ್‍ಸಿಸಿ ಪದಚ್ಯುತಗೊಳಿಸಿದ್ದರು. ತಾನು ಅಧಿಕಾರಕ್ಕೇರಿದ ಬಳಿಕ ಸಿಸಿ ಬ್ರದರ್ ಹುಡ್ ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News