×
Ad

ಮಹಾರಾಷ್ಟ್ರದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ;15 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ

Update: 2019-05-01 13:58 IST

ಮುಂಬೈ, ಮೇ 1: ಮಹಾರಾಷ್ಟ್ರದ ಗಡ್ಚಿರೋಲಿ ಯಲ್ಲಿ  ಬುಧವಾರ ನಕ್ಸಲರ  ಐಇಡಿ ಬಾಂಬ್ ದಾಳಿಯಿಂದಾಗಿ  15 ಮಂದಿ ಯೋಧರು  ಹುತಾತ್ಮರಾದ ಘಟನೆ ಬುಧವಾರ ನಡೆದಿದೆ.

ಸಿ-60 ಕಮಾಂಡೋಗಳು, ಭದ್ರತಾ ನಿಗ್ರಹ ಪಡೆ, ಪೊಲೀಸರು   ಕುರ್ಕೆಡಾ –ಕೊರ್ಚಿ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ  ನಕ್ಸಲರು ದಾಳಿ ನಡೆಸಿದ್ದಾರೆ.  ಒಟ್ಟು 16 ಮಂದಿ ಯೋಧರು ವಾಹನದಲ್ಲಿದ್ದರು. ಐಇಡಿ ಸ್ಫೋಟಕ್ಕೆ ವಾಹನ ಛಿದ್ರಛಿದ್ರವಾಗಿದೆ.

 ಕಳೆದ 24 ಗಂಟೆಗಳಲ್ಲಿ ಎರಡನೇ ದಾಳಿ ನಡೆಸಿರುವ ನಕ್ಸಲರು ಯೋಧರ ಸಾವಿಗೆ ಕಾರಣರಾಗಿದ್ದಾರೆ.  ಇಂದು ಬೆಳಗ್ಗೆ ರಸ್ತೆ  ಕಾಮಗಾರಿ ನಡೆಸುತ್ತಿದ್ದ 30ಕ್ಕೂ ಅಧಿಕ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿ ಪೈಶಾಚಿಕ ಕೃತ್ಯ ನಡೆಸಿದ್ದಾರೆ

ಮೂರು ವಾರಗಳಲ್ಲಿ ಮೂರನೇ ಬಾರಿ ದಾಳಿ ನಡೆಸಿದ್ದಾರೆ. ಇದರಿಂದಾಗಿ 25ಕ್ಕೂ ಅಧಿಕ ಮಂದಿ ಯೋಧರು ಹುತಾತ್ಮರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News