ಮಟ್ಕಾ: ಓರ್ವನ ಬಂಧನ
Update: 2019-05-01 22:31 IST
ಮಂಗಳೂರು, ಮೇ 1: ಮೂಡುಶೆಡ್ಡೆಯ ಶಿವನಗರದಲ್ಲಿ ಮಟ್ಕಾ ಆಡುತ್ತಿದ್ದ ವ್ಯಕ್ತಿಯನ್ನು ಕಾವೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ದೀಪಕ್ (37) ಬಂಧಿತ ಆರೋಪಿ.
ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿ 7,880 ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಕಾವೂರು ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು.