×
Ad

ದನಗಳ್ಳತನದ ಶಂಕೆ: ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು

Update: 2019-05-03 11:32 IST

ಹೊಸದಿಲ್ಲಿ, ಮೇ 3: ದನಗಳ್ಳತನ ಮಾಡಿದ್ದಾನೆಂಬ ಶಂಕೆಯ ಮೇಲೆ ಬಿಹಾರದ ಅರಾರಿಯಾ ಜಿಲ್ಲೆಯ ಡಾಕ್ ಹರಿಪುರ್ ಗ್ರಾಮದಲ್ಲಿ ಗುಂಪೊಂದು 44 ವರ್ಷದ ವ್ಯಕ್ತಿಯೋರ್ವನನ್ನು ಹೊಡೆದು ಸಾಯಿಸಿದೆ.

ಮೃತರನ್ನು ಮಹೇಶ್ ಯಾದವ್ ಎಂದು ಗುರುತಿಸಲಾಗಿದೆ. ಆತ ತನ್ನಿಬ್ಬರು ಸಹವರ್ತಿಗಳ ಜತೆಗೂಡಿ ದನಗಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಗುಂಪೊಂದು ಆತನನ್ನು ಹಿಡಿದು ಥಳಿಸಿ ಸಾಯಿಸಿದೆ ಎಂದು ರಾಬರ್ಟ್ಸ್ ಗಂಜ್ ಪೊಲೀಸ್ ಠಾಣಾಧಿಕಾರಿ ಶಿವ್ ಶರನ್ ಸಾಹ್ ಹೇಳಿದ್ದಾರೆ.

ಘಟನೆ ಬಗ್ಗೆ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು.

ಪ್ರಕರಣದ ಕುರಿತಂತೆ ಕೆಲ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿದ್ದವೆಂದು ಹೇಳಲಾಗಿದೆ.

ಕಳೆದ ವರ್ಷದ ಡಿಸೆಂಬರ್ 29ರಂದು ಇದೇ ಪ್ರದೇಶದಲ್ಲಿ ಗೋ ಕಳ್ಳತನ ವದಂತಿಯ ಹಿನ್ನೆಲೆಯಲ್ಲಿ ಸುಮಾರು 300 ಮಂದಿಯ ತಂಡ ಮುಹಮ್ಮದ್ ಕಾಬುಲ್ ಎಂಬವರನ್ನು ಥಳಿಸಿ ಸಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News