ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಹೊರೆಕಾಣಿಕೆ
Update: 2019-05-03 21:12 IST
ಮಂಗಳೂರು, ಎ.3: ಇತಿಹಾಸ ಪ್ರಸಿದ್ಧ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಸಿರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ದೀಪ ಬೆಳಗಿಸುವುದರ ಮೂಲಕ ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಜೆ.ಆರ್. ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪಕ್ಷದ ಮುಖಂಡರಾದ ವಿಶ್ವಾಸ್‌ಕುಮಾರ್ ದಾಸ್, ಅಬ್ದುಲ್ ಸಲೀಂ, ಟಿ.ಕೆ. ಸುಧೀರ್, ನೀರಜ್ ಪಾಲ್, ರಮಾನಂದ ಪೂಜಾರಿ, ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ನಮಿತಾ ಡಿ. ರಾವ್, ಶೋಭಾ ಕೇಶವ್, ದುರ್ಗಾ ಪ್ರಸಾದ್, ಮಕ್ಬೂಲ್ ಅಹ್ಮದ್, ವಿಜಯ ಬಾಬು, ಯಶವಂತ್, ದಿನೇಶ್ ಕುಂಪಲ, ಸಮರ್ಥ್ ಭಟ್, ಕೃತಿನ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.