ಕುಂಜಿಬೆಟ್ಟು: ಮಕ್ಕಳ ಬೇಸಿಗೆ ಶಿಬಿರ
ಉಡುಪಿ, ಮೇ 3: ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಮಕ್ಕಳ ಬೇಸಿಗೆ ಶಿಬಿರವು ಕುಂಜಿಬೆಟ್ಟಿನ ಶ್ರೀಗಾಯತ್ರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರಗಿತು.
5ನೆ ತರಗತಿಯಿಂದ 10ನೆ ತರಗತಿವರೆಗಿನ 80 ವಿದ್ಯಾರ್ಥಿಗಳು ನಿವೃತ್ತ ಪ್ರಾಧ್ಯಾಪಕ ಬಿ.ಎ.ಆಚಾರ್ಯ ಮಣಿಪಾಲ ನಿರ್ದೇಶನದಲ್ಲಿ ಜರಗಿದ ಈ ಶಿಬಿರದಲ್ಲಿ ಭಾಗವಹಿಸಿದರು. ಶಿಬಿರವನ್ನು ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಮಕ್ಕಳ ತಜ್ಞ ಾ.ದಿನೇಶ್ ಎಂ.ನಾಯಕ್ ಉದ್ಘಾಟಿಸಿದರು.
ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ರವಿ ಆಚಾರ್ಯ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ದಿವಾಕರ ವಿ.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್ ಆಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ ಆಚಾರ್ಯ ವಂದಿಸಿದು.
ಸಂಪನ್ಮೂಲ ವ್ಯಕ್ತಿಗಳಾಗಿ ಸಾವಿತ್ರಿ ಆಚಾರ್ಯ, ರಾಜೀವಿ ಆಚಾರ್ಯ, ನಳಿನಿ ಸುಂದರ ಆಚಾರ್ಯ, ಸವಿತಾ, ಲಕ್ಷ್ಮಿ, ವಿದ್ಯಾ ವಿಶ್ವೇಶ್, ಜಯಂತ್ ಪುರೋಹಿತ್, ಬಾಲಚಂದ್ರ ಅಂಬಾಗಿಲು, ಜಗದೀಶ್ ಆಚಾರ್ಯ, ಗಣಪತಿ ಆಚಾರ್ಯ ಬೆಳ್ಮಣ್, ಬಿ.ಎ.ಆಚಾರ್ಯ ಸಹಕರಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಕುಂಜಿಬೆಟ್ಟು ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಹಾಗೂ ಟಿ.ಎ.ಪೈ.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಾಪಕ ಯೋಗೀಶ್ ಆಚಾರ್ಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ಲಕ್ಷ್ಮೀ ಶಿಬಿರದ ವರದಿ ಮಂಡಿಸಿದರು. ಶ್ರೀೀನಿಧಿ ಹಾಗೂ ಶಾಲಿನಿ ಗಂಗಾಧರ್ ಕಾರ್ಯಕ್ರಮ ನಿರೂ ಪಿಸಿದರು. ಸ್ವಾತಿ ಕಟಪಾಡಿ ವಂದಿಸಿದರು.
ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡುಗಾರಿಕೆ, ಅಭಿನಯ, ಯೋಗಾಸನ ಪ್ರದರ್ಶ, ಕಿರುನಾಟಕ ಪ್ರದರ್ಶನಗೊಂಡಿತು.