ಜಮ್ಮುಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಹಿಜ್ಬುಲ್ ಕಮಾಂಡರ್ ಸಹಿತ ಮೂವರು ಉಗ್ರರು ಹತ

Update: 2019-05-03 16:16 GMT

ಶ್ರೀನಗರ, ಮೇ 3: ದಕ್ಷಿಣ ಕಾಶ್ಮೀರದ ಶೋಪಿಯಾನದಲ್ಲಿ ಭದ್ರತಾ ಪಡೆ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ತಾರಿಕ್ ಮೊಲ್ವಿ ಆಲಿಯಾಸ್ ಮುಫ್ತಿ ವಕಾಸ್ ಹಾಗೂ ಲತೀಫ್ ಟೈಗರ್ ಸಹಿತ ಮೂರು ಮಂದಿ ಉಗ್ರರು ಹತರಾಗಿದ್ದಾರೆ. ಇನ್ನೋರ್ವ ಭಯೋತ್ಪಾದಕನನ್ನು ಶೋಪಿಯಾನದ ಛೋಟಿಗಾಂವ್‌ನ ಶಾರಿಕ್ ಅಹ್ಮದ್ ನೆಗ್ರೂ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್ ನಡೆದ ಪ್ರದೇಶದಿಂದ ಎರಡು ಎಕೆ 47 ಹಾಗೂ ಸ್ವಯಂ ಲೋಡ್ ಮಾಡುವ ರೈಫಲ್‌ಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಶೋಪಿಯಾನ ಜಿಲ್ಲೆಯ ಇಮಾಮ್ ಸಾಹಿಬ್‌ನ ಅಡ್ಖರಾ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಉಗ್ರರು ಹಾಗೂ ಭದ್ರತಾ ಪಡೆಯ ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ ಮೂವರು ಉಗ್ರರು ಹತರಾದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News