ತೌಡುಗೋಳಿ: ಮೇ 4ರಂದು ನರಿಂಗಾನ ಯುವಕ ಮಂಡಲದ 41ನೇ ವಾರ್ಷಿಕೋತ್ಸವ
ಬಂಟ್ವಾಳ: ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ ನರಿಂಗಾನ ಯುವಕ ಮಂಡಲದ 41ನೇ ವಾರ್ಷಿಕೋತ್ಸವ ಯುವಕ ಮಂಡಲದ ಕಲಾಮಂದಿರದಲ್ಲಿ ಮೇ 4ರಂದು ರಾತ್ರಿ ಗಂಟೆ 8 ರಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾಧಕರಾದ ಮೊಂಟೆಪದವು ಪ್ರೌಢಶಾಲೆಯ ಉಪ ಪ್ರಾಂಶುಪಾಲ ಸಂತೋಷ್ ಕುಮಾರ್ ಟಿ.ಎನ್ ಹಾಗೂ ತೌಡುಗೋಳಿಯ ಮುಡೂರು ತೋಕೆ ಶ್ರೀ ಕಾವಿಸುಬ್ರಹ್ಮಣ್ಯ ಕಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ ಅವರಿಗೆ ಸನ್ಮಾನ, ಸ್ಥಳೀಯ ಪ್ರತಿಭಾನ್ವಿತ ಕಲಾವಿದರು, ಪ್ರೌಢ ಶಾಲೆ ಹಾಗೂ ಯುವಕ ಯುವತಿಯರಿಂದ ನೃತ್ಯ ಹಾಸ್ಯ ಪ್ರಸಹನ ನಡೆಯಲಿದೆ. ರಾತ್ರಿ 9.30ರಿಂದ ತುಳುವೆರೆ ಉಡಲ್ ಜೋಡುಕಲ್ ತಂಡದಿಂದ ಡಾ. ಸಂಜೀವ ದಂಡಕೇರಿ ವಿರಚಿತ, ಖ್ಯಾತ ಕಲಾವಿದ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ದೇಶನದಲ್ಲಿ `ಬಯ್ಯಮಲ್ಲಿಗೆ' ತುಳು ಸಾಂಸಾರಿಕ ನಾಟಕ ಪ್ರದರ್ಶನ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಮಮತಾ ಡಿ.ಎಸ್.ಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ ತಿಳಿಸಿದ್ದಾರೆ.