ಬೈಕ್ ಅಪಘಾತ: ಸಹಸವಾರೆ ಮೃತ್ಯು
Update: 2019-05-03 22:35 IST
ಬ್ರಹ್ಮಾವರ, ಮೇ 3: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಸಹಸವಾರೆ ಮೃತಪಟ್ಟ ಘಟನೆ ಹೇರಾಡಿ ಗ್ರಾಮದ ಕೂಡ್ಲಿ ಕ್ರಾಸ್ ಬಳಿ ಮೇ 2ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಶೃಂಗೇರಿ ಕುಲಾಲ್ತಿ ಎಂದು ಗುರುತಿಸಲಾಗಿದೆ. ಸವಾರ ವಿಜಯ ಕುಲಾಲ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರು ಬೈಕಿನಲ್ಲಿ ಬಾರ್ಕೂರು ಕಡೆಗೆ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿರಸ್ತೆಯಲ್ಲಿ ಪಲ್ಟಿ ಯಾಯಿತ್ತೆನ್ನಲಾಗಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದು, ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಶೃಂಗೇರಿ ಕುಲಾಲ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.