ಜೂಲಿಯನ್ ಅಸಾಂಜ್‌ಗೆ ಪ್ರಮಾಣ ಮೀರಿದ ಶಿಕ್ಷೆ: ವಿಶ್ವಸಂಸ್ಥೆ

Update: 2019-05-03 17:08 GMT

ಜಿನೇವ, ಮೇ 3: ಬ್ರಿಟನ್‌ನಲ್ಲಿ ಜಾಮೀನು ಶರತ್ತುಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅಲ್ಲಿನ ನ್ಯಾಯಾಲಯವೊಂದು ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ಗೆ ವಿಧಿಸಿರುವ 50 ವಾರಗಳ ಜೈಲು ‘ಪ್ರಮಾಣ ಮೀರಿದ’ ಶಿಕ್ಷೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತರು ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಅಸಾಂಜ್ ಗಂಭೀರ ಕ್ರಿಮಿನಲ್ ಅಪರಾಧವನ್ನು ಮಾಡಿದ್ದಾರೆ ಎಂಬಂತೆ ಅವರನ್ನು ಅತಿ ಭದ್ರತೆಯ ಬೆಲ್ಮಾರ್ಶ್ ಜೈಲಿನಲ್ಲಿ ಇಡಲಾಗಿದೆ ಎಂದು ವಿಶ್ವಸಂಸ್ಥೆಯ ಸ್ವೇಚ್ಛಾಚರದ ಬಂಧನ ಕುರಿತ ಕ್ರಿಯಾ ಸಮಿತಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದು ‘ಅಗತ್ಯ ಮತ್ತು ಪ್ರಮಾಣ ತತ್ವ’ಗಳಿಗೆ ವಿರುದ್ಧವಾಗಿದೆ ಎಂಬಂತೆ ಕಂಡುಬರುತ್ತಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News