×
Ad

ಕೂಲಿ ಕಾರ್ಮಿಕರ ಆಧಾರ್ ಕಾರ್ಡ್ ದುರ್ಬಳಕೆ: ದೂರು

Update: 2019-05-03 22:41 IST

ಉಡುಪಿ, ಮೇ 3: ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಆಧಾರ್ ಕಾರ್ಡ್ ಬಳಸಿಕೊಂಡು ಅಪರಾಧ ಪ್ರಕರಣಗಳ ಆರೋಪಿಗಳಿಗೆ ಸಿಮ್ ಕಾರ್ಡ್ ನೀಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

ಕೂಲಿ ಕಾರ್ಮಿಕರಾಗಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಈಶ್ವರ್ ಅಚನೂರು(35), ಸಂತೋಷ್ ನಕ್ಕರ್ಗುಂಡಿ(25) ಹಾಗೂ ಹನು ಮಂತ ಎತ್ತಿನಮನಿ (38) ಎಂಬವರು ಸುಮಾರು ಒಂದು ವರ್ಷದ ಹಿಂದೆ ಉಡುಪಿಯ ನಿಟ್ಟೂರು ಬಳಿಯ ಮೊಬೈಲ್ ಅಂಗಡಿಯೊಂದರಲ್ಲಿ ಆಧಾರ್ ಕಾರ್ಡ್ ಮತ್ತು ಹೆಬ್ಬೆರಳಿನ ಗುರುತನ್ನು ನೀಡಿ  ಸಿಮ್ ಖರೀದಿಸಿ ದ್ದರು.

ಈ ಸಿಮ್ ಕಾರ್ಡ್ ವಿತರಕರು ಇವರ ಆಧಾರ್ ಕಾರ್ಡ್ ಪ್ರತಿ ಹಾಗೂ ಹೆಬ್ಬೆರಳಿನ ಗುರುತನ್ನು ಬೇರೆ ಸಿಮ್ ನಂಬರಿಗೆ ಉಪಯೋಗಿಸಿ ಆ ಸಿಮ್ ಕಾರ್ಡ್‌ಗಳನ್ನು ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ದಾಖಲಾಗಿರುವ ಪ್ರಕರಣದ ಆರೋಪಿಗಳಿಗೆ ನೀಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News