ಅಕ್ರಮ ಮರಳು ಸಾಗಾಟ: ಲಾರಿ ಸಹಿತ ಆರೋಪಿ ಸೆರೆ
Update: 2019-05-03 22:46 IST
ಕಾಪು, ಮೇ 3: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪಿ ಸಹಿತ ಲಾರಿಯನ್ನು ಕಾಪು ಪೊಲೀಸರು ಪಾಂಗಾಳ ಹಳೆ ವಿಜಯಾ ಬ್ಯಾಂಕ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇ 3ರಂದು ನಸುಕಿನ ವೇಳೆ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಕಡೆಯಿಂದ ಅಕ್ರಮವಾಗಿ ಮರಳನ್ನು ಲಾರಿಯಲ್ಲಿ ಸಾಗಿಸು ತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ದ್ದಾರೆ. ಲಾರಿ ಚಾಲಕ ಪ್ರವೀಣ್ ಎಲ್., 15,000 ರೂ. ಮೌಲ್ಯದ 17 ಟನ್ ಮರಳು, ಲಾರಿ ಹಾಗೂ ಮೊಬೈಲ್‌ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.