×
Ad

ಎಸೆಸ್ಸೆಲ್ಸಿ ಫಲಿತಾಂಶ: ವೀರಾಜಪೇಟೆಯ ಆಯಿಶಾ ಝೋಯಾ, ಸುಳ್ಯದ ಝಿಯನಾರಿಗೆ ಉತ್ತಮ ಅಂಕ

Update: 2019-05-03 23:18 IST
ಆಯಿಶಾ ಝೋಯಾ, ಝಿಯನಾ

ವೀರಾಜಪೇಟೆ ಕಾವೇರಿ ಸ್ಕೂಲ್‌ನ ವಿದ್ಯಾರ್ಥಿನಿ ಆಯಿಶಾ ಝೋಯಾ ಕೆ.ಆರ್. ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 577 ಅಂಕಗಳಿಸುವ ಮೂಲಕ ಶೇ. 92.32 ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ತಾಲೂಕಿನ ಚೋಕಂಡಲ್ಲಿ ನಿವಾಸಿ ಮುಹಮ್ಮದ್ ರಫೀ ಮತ್ತು ನಸೀಮಾ ದಂಪತಿಯ ಪುತ್ರಿ.

ಸುಳ್ಯ ತಾಲೂಕಿನ ಗ್ರೀನ್ ವ್ಯೂ ಕಾಲೇಜಿನ ವಿದ್ಯಾರ್ಥಿನಿ ಕೆ.ಕೆ. ಝಿಯನಾ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 525 ಅಂಕ ಪಡೆದು ಶೇ. 84 ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಇವರು ದಿ. ಕುಪ್ಪಂದರೆ ಮುಹಮ್ಮದ್ ಖಾತೀಂ ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News