×
Ad

ಉಡುಪಿ: ಫಲಾನುಭವಿಗಳಿಗೆ ರಮಝಾನ್ ಕಿಟ್ ವಿತರಣೆ

Update: 2019-05-04 20:47 IST

ಉಡುಪಿ, ಮೇ 4: ಕುವೈಟ್ ಮಣಿಪುರ ಮುಸ್ಲಿಮ್ ಅಸೋಸಿಯೇಶನ್ ವತಿಯಿಂದ ಸಯ್ಯದ್ ಹಸನ್ ಮಣಿಪುರ ನೇತೃತ್ವದಲ್ಲಿ ರಮದಾನ್ ಕಿಟ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಸುಮಾರು 14 ವರ್ಷಗಳಿಂದ ಬಡವರು ಹಾಗೂ ಬಡರೋಗಿಗಳಿಗಾಗಿ ಸಹಾಯಹಸ್ತ ನೀಡುತ್ತಿರುವ ಈ ಸಂಸ್ಥೆಯ ವತಿಯಿಂದ ಕಳೆದ ನಾಲ್ಕು ವರ್ಷ ಗಳಿಂದ ಆರ್ಥಿಕವಾಗಿ ಕಷ್ಟದಲ್ಲಿರುವ ಬಡವರಿಗೆ ರಮದಾನ್ ತಿಂಗಳ ಪಡಿತರ ಸಾಮಾಗ್ರಿಗಳ ಕಿಟ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರುಗಳ ಸಹಕಾರದಿಂದ ನೀಡುತ್ತಿದೆ.

ಮಜೀದ್ ಬಿರಾಲಿ ಉಚ್ಚಿಲ ಹಾಗೂ ಶಂಶು ಮಣಿಫುರ, ಫಹದ್ ನೆಜಾರ್, ಅಬ್ಬಾಸ್ ಮಣಿಪುರ, ರಫೀಕ್ ಮಣಿಪುರ, ರಜಾಕ್ ಉಚ್ಚಿಲ ಅಬೂಬಕ್ಕರ್ ಉಚ್ಚಿಲ, ರಜಾಬ್ ಉಚ್ಚಿಲ, ಸುಲೈಮನ್, ಉಮರ್ ಉಚ್ಚಿಲ ನೇತೃತ್ವದಲ್ಲಿ ರಮದಾನ್ ಕಿಟ್‌ಗಳನ್ನು ಬಡ ಅರ್ಹ ಜನರ ಮನೆ ಮನೆಗೆ ಮುಟ್ಟಿಸುವ ಮೂಲಕ ವಿತರಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News