ಅಮೇಠಿಯ ಗ್ರಾಮ ಮುಖ್ಯಸ್ಥನಿಗೆ ಬಿಜೆಪಿಯಿಂದ ಲಂಚ: ಪ್ರಿಯಾಂಕಾ ಗಾಂಧಿ ಆರೋಪ

Update: 2019-05-04 15:21 GMT

ಅಮೇಠಿ, ಮೇ 4: ಅಮೇಠಿ ಲೋಕಸಭಾ ಕ್ಷೇತ್ರದ ಗ್ರಾಮ ಮುಖ್ಯಸ್ಥನಿಗೆ 20 ಸಾವಿರ ರೂಪಾಯಿ ಲಂಚವನ್ನು ಬಿಜೆಪಿ ರವಾನಿಸಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಹಣ ವಿತರಣೆ ಮಾಡುವ ಮೂಲಕ ಇಲ್ಲಿ ಅಕ್ರಮ ಚುನಾವಣಾ ಪ್ರಚಾರ ನಡೆಯುತ್ತಿದೆ. ನಾನು ಗ್ರಾಮ ಮುಖ್ಯಸ್ಥನಿಗೆ ನಮ್ಮ ಚುನಾವಣಾ ಪ್ರಣಾಳಿಕೆ ಕಳುಹಿಸಿದೆ. ಆದರೆ, ಬಿಜೆಪಿ ಕವರಿನಲ್ಲಿ 20 ಸಾವಿರ ರೂಪಾಯಿ ಕಳುಹಿಸಿ ಕೊಟ್ಟಿದೆ. ಅಮೇಠಿ ಗ್ರಾಮ ಮುಖ್ಯಸ್ಥ 20 ಸಾವಿರಕ್ಕೆ ತನ್ನನ್ನೇ ಮಾರಿಕೊಳ್ಳುತ್ತಾರೆ ಎಂದು ಬಿಜೆಪಿ ಭಾವಿಸಿದೆ ಎಂದರು.

ಅಮೇಠಿಯಲ್ಲಿ ಬಿಜೆಪಿ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿದೆ ಎಂದು ಅವರು ಹೇಳಿದರು. ದೇಶದಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ಜನರು ದೊಡ್ಡ ಸಂಖ್ಯೆಯಲ್ಲಿ ಮತ ಹಾಕಿದ್ದರು. ಈಗ ಕೇಂದ್ರದಲ್ಲಿ ಹಾಗೂ ಇಲ್ಲಿ ಬಿಜೆಪಿ ಸರಕಾರ ಇದೆ. ಇದರ ಪರಿಣಾಮ ತನ್ನ ಕ್ಷೇತ್ರವಾದ ಅಮೇಠಿಯಲ್ಲಿ ರಾಹುಲ್ ಗಾಂಧಿ ಆರಂಭಿಸಿದ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿ ಇಲ್ಲಿಗೆ ಈ ಐದು ವರ್ಷಗಳಲ್ಲಿ 16 ಬಾರಿ ಮಾತ್ರ ಭೇಟಿ ನೀಡಿದ್ದಾರೆ. ಪ್ರತಿ ಭಾರಿ ಬಂದಾಗಲೂ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ಇಲ್ಲಿದ್ದರು. ಆದರೆ, ಇದಕ್ಕೆ ಹೋಲಿಸಿದರೆ, ರಾಹುಲ್ ಗಾಂಧಿ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಜನರನ್ನು ಭೇಟಿಯಾಗಿದ್ದಾರೆ. ಅವರ ಸಮಸ್ಯೆ ಆಲಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News