58.6 ಕೋ. ರೂ. ಮೌಲ್ಯದ 10 ಸಾವಿರ ತೆಂಗಿನ ಮರಗಳು ನಾಶ

Update: 2019-05-04 17:11 GMT

ಅಮರಾವತಿ: ಫನಿ ಚಂಡಮಾರುತದಿಂದ 10 ಸಾವಿರ ತೆಂಗಿನ ಮರಗಳು ಧರಾಶಾಹಿಯಾಗಿದ್ದು, 58.6 ಕೋ. ರೂ. ನಷ್ಟವಾಗಿದೆ ಎಂದು ಆಂಧ್ರಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಕೂಡಾ ಹಾನಿ ಉಂಟಾಗಿದೆ. ಮುಖ್ಯವಾಗಿ ಒಡಿಶಾ ಗಡಿಯ ಶ್ರೀಕಾಕುಳಂ ಜಿಲ್ಲೆಯಲ್ಲಿ 958 ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ವಿಝಿಯನಗರಮ್‌ನಲ್ಲಿ 29 ಎಕರೆ ಬಾಳೆ ತೋಟ ನಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಫನಿ ಚಂಡಮಾರುತದಿಂದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಯ 145 ಗ್ರಾಮಗಳಲ್ಲಿ 2.47 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ‘‘ನಾವು 139 ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದೇವೆ. ಇಲ್ಲಿ 14,460 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ವಿಝಿಯನಗರಮ್‌ನಿಂದ 2 ಸಾವಿರ ಜನರನ್ನು 15 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ’’ೆ ಎಂದು ರಾಜ್ಯ ಕಾರ್ಯದಶಿ ಎಲ್.ವಿ. ಸುಬ್ರಹ್ಮಣೀಯನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News