ಎಐಎಡಿಎಂಕೆ ಇಬ್ಬರು ಶಾಸಕರ ಅನರ್ಹತೆ ತಡೆಹಿಡಿದ ಸರ್ವೋಚ್ಚ ನ್ಯಾಯಾಲಯ

Update: 2019-05-06 15:11 GMT

ಹೊಸದಿಲ್ಲಿ, ಮೇ.6: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಕಾರಣಕ್ಕೆ ತಮಿಳು ನಾಡು ವಿಧಾನಸಭಾ ಸ್ಪೀಕರ್ ಅವರಿಂದ ನೋಟೀಸ್ ಪಡೆದುಕೊಂಡಿದ್ದ ಎಐಎಡಿಎಂಕೆಯ ಇಬ್ಬರು ಶಾಸಕರ ಅನರ್ಹತೆ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ತಡೆ ನೀಡಿದೆ.

ಎಐಎಡಿಎಂಕೆ ಶಾಸಕರಾದ ವಿ.ಟಿ ಕಲೈಸೆಲ್ವನ್ ಮತ್ತು ಇ.ರತ್ನಸಭಾಪತಿ ಸಲ್ಲಿಸಿರುವ ಅರ್ಜಿಗೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶ ದೀಪಕ್ ಗುಪ್ತಾ ನೇತೃತ್ವದ ಪೀಠ ನೋಟೀಸ್ ಜಾರಿ ಮಾಡಿದೆ. ಎಎಂಎಂಕೆ ಮುಖಂಡ ಟಿಟಿವಿ ದಿನಕರನ್ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಶಾಸಕರಾದ ಎ.ಪ್ರಭು, ಕಲೈಸೆಲ್ವನ್ ಮತ್ತು ಇ.ರತ್ನಸಭಾಪತಿಗೆ ಸ್ಪೀಕರ್ ಪಿ.ಧನಪಾಲ್ ಎಪ್ರಿಲ್ 30ರಂದು ನೋಟಿಸ್ ಜಾರಿ ಮಾಡಿದ್ದರು.

ಮೂವರು ಶಾಸಕರ ಪೈಕಿ ಇಬ್ಬರು ತಮಗೆ ನೀಡಲಾದ ನೋಟಿಸ್ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News