ಲಂಕಾ: ಉಗ್ರರ ತರಬೇತಿ ಶಿಬಿರ ಪತ್ತೆ

Update: 2019-05-06 16:52 GMT

 ಕಟ್ಟಂಕುಡಿ (ಶ್ರೀಲಂಕಾ), ಮೇ 6: ಶ್ರೀಲಂಕಾ ಪೊಲೀಸರು ರವಿವಾರ ಪೂರ್ವದ ಪಟ್ಟಣ ಕಟ್ಟಂಕುಡಿಯಲ್ಲಿ 10 ಎಕರೆ ವಿಸ್ತೀರ್ಣದ ಶಿಬಿರವೊಂದನ್ನು ಪತ್ತೆಹಚ್ಚಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಈಸ್ಟರ್ ರವಿವಾರ ನಡೆದ ಬಾಂಬ್ ದಾಳಿಯಲ್ಲಿ ಶಾಮೀಲಾದ ಭಯೋತ್ಪಾದಕರು ಈ ಶಿಬಿರದಲ್ಲಿ ಗುಂಡು ಹಾರಾಟ ಮತ್ತು ಬಾಂಬ್ ತಯಾರಿಕೆ ಅಭ್ಯಾಸ ಮಾಡಿರಬಹುದು ಎಂಬುದಾಗಿ ಶಂಕಿಸಲಾಗಿದೆ.

ಎಪ್ರಿಲ್ 21ರ ದಾಳಿಯ ರೂವಾರಿ ಎಂಬುದಾಗಿ ಶಂಕಿಸಲಾಗಿರುವ ಝಹ್ರಾನ್ ಹಾಶಿಮ್‌ನ ತವರು ಪಟ್ಟಣ ಕಟ್ಟಂಕುಡಿಯ ಹೊರವಲಯದಲ್ಲಿರುವ ಬಡ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡು ಈ ಶಿಬಿರವಿದೆ.

‘‘ಅವರು ಈ ಪ್ರದೇಶ ಸಾಮಾನ್ಯವಾಗಿದೆ ಎಂದು ತೋರಿಸಲು ಬಯಸಿದ್ದರು. ಅಲ್ಲಿಗೆ ಯಾರಾದರೂ ನೋಡಲು ಬಂದರೆ, ಅದು ತೋಟದಂತೆ ಕಂಡುಬರುತ್ತಿತ್ತು. ಆದರೆ, ಅಲ್ಲಿ ಅವರು ಭಯೋತ್ಪಾದನೆ ತರಬೇತಿ ನಡೆಸುತ್ತಿದ್ದರು’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News