ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾತೈಲ ಮಾರುವ ಭರವಸೆ ನೀಡಲು ಸಾಧ್ಯವಿಲ್ಲ: ಅಮೆರಿಕ

Update: 2019-05-06 17:41 GMT

ಹೊಸದಿಲ್ಲಿ,ಮೇ.6: ಸದ್ಯ ಭಾರತ ಇರಾನ್‌ನಿಂದ ತೈಲ ಖರೀದಿಸುವ ಮೇಲೆ ನಿರ್ಬಂಧ ಹೇರಿರುವ ಅಮೆರಿಕ, ಇದೇ ವೇಳೆ, ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾತೈಲ ಮಾರಾಟ ಮಾಡುವ ಬಗ್ಗೆ ಭರವಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ತೈಲ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿದೆ. ಹಾಗಾಗಿ ಅದನ್ನು ರಿಯಾಯಿತಿ ದರದಲ್ಲಿ ನೀಡಿ ಎಂದು ಅವರಿಗೆ ಸರಕಾರ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ ತಿಳಿಸಿದ್ದಾರೆ. ಸದ್ಯ ಅಮೆರಿಕ ನಿರ್ಬಂಧದ ಮೇಲಿನ ಸಡಿಲಿಕೆಯನ್ನು ತೆಗೆದು ಹಾಕಿರುವುದರಿಂದ ಈ ಮೇಯಿಂದ ಭಾರತ ಇರಾನ್‌ನಿಂದ ಕಚ್ಚಾತೈಲ ಆಮದು ಮಾಡುವುದನ್ನು ಸ್ಥಗಿತಗೊಳಿಸಿದೆ.

ಇರಾನ್ ಖರೀದಿದಾರರಿಗೆ 60 ದಿನಗಳ ಸಾಲಾವಕಾಶ ನೀಡುತ್ತಿದ್ದ ಕಾರಣ ಭಾರತೀಯ ಶುದ್ಧೀಕರಣ ಘಟಕಗಳಿಗೆ ಲಾಭದಾಯಕ ಖರೀದಿಯಾಗಿತ್ತು. ಆದರೆ ಪರ್ಯಾಯ ಪೂರೈಕೆದಾರರಾದ ಸೌದಿ ಅರೇಬಿಯ, ಕುವೈಟ್, ಇರಾಕ್, ನೈಜೀರಿಯ ಮತ್ತು ಅಮೆರಿಕದ ನಿಬಂಧನೆಗಳು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News