ಮಾಡೂರು ಗಲ್ಫ್ ಫ್ರೆಂಡ್ಸ್ ವತಿಯಿಂದ ರಮಝಾನ್ ರೇಷನ್ ಕಿಟ್ ವಿತರಣೆ

Update: 2019-05-07 17:24 GMT

ಕೋಟೆಕಾರ್: ಮಾಡೂರು ಗಲ್ಫ್ ಫ್ರೆಂಡ್ಸ್ ವೆಲ್ಫೇರ್ ಅಸೋಸಿಯೇಶನ್ (ಎಂಜಿಎಫ್) ಅನಿವಾಸಿ ಭಾರತೀಯರ ಸಂಘಟನೆ ವತಿಯಿಂದ ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ಪವಿತ್ರ ರಮಝಾನ್ ತಿಂಗಳ ರೇಷನ್ ಕಿಟ್ ವಿತರಣೆಯನು ಜಮಾಅತ್ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡೂರು ಖತೀಬ್ ಬಶೀರ್ ಅಹ್ಸನಿ ತೋಡಾರ್  ದುವಾ ಮಾಡುವ ಮೂಲಕ ಉದ್ಘಾಟಿಸಿದರು. ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲ್ ಹಮೀದ್ ಹಸನ್ ಮಾಡೂರು ಸಂಘಟನೆಯ ಕಾರ್ಯ ಕಲಾಪಗಳನ್ನು ವಿವರಿಸಿದರು.

ಈ ಸಂದರ್ಭ  ಎಂಜಿಎಫ್ ಅಧ್ಯಕ್ಷ ಅಬ್ದುಲ್ ಶಾಕಿರ್ ಮಾಡೂರು, ಮಸೀದಿಯ ಅಧ್ಯಕ್ಷ ಮಜಿದ್ ಹಸನ್ ಮಾಡೂರು, ಕಾರ್ಯದರ್ಶಿ ನವಾಝ್, ಸದಸ್ಯರಾದ ಅನ್ವರ್ ಶೇಕ್ ಫಕೀರ್, ರಫೀಕ್ ಮುಂಬೈ, ರಶೀದ್ ಮತ್ತು ಎಂಜಿಎಫ್ ಸದಸ್ಯರಾದ ಹಫೀಝ್ ಶೇಕ್, ಸಿದ್ದೀಕ್ ಮಡಿಕೇರಿ, ನಝೀರ್ ಹೈದರ್ ಹಾಗೂ ಎಂ.ವೈ.ಎಫ್ ಅಧ್ಯಕ್ಷ ಎಂ.ಎ. ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News