×
Ad

ಮಂಗಳೂರು: ಜಮೀಯ್ಯತ್ತುಲ್ ಫಲಾಹ್‌ನಿಂದ ರಮಝಾನ್ ಕಿಟ್ ವಿತರಣೆ

Update: 2019-05-08 18:36 IST

ಮಂಗಳೂರು, ಮೇ 8: ಸಮಾನತೆಯನ್ನು ಸಾರುವ ಪವಿತ್ರ ರಮಝಾನ್ ಆಚರಣೆಯು ಸಂತಸದಾಯಕವಾಗಿರಬೇಕು ಮತ್ತು ಎಲ್ಲರೂ ಹಸಿವು ಮುಕ್ತವಾಗಿ ಆಚರಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ರಮಝಾನ್ ತಿಂಗಳ ದಿನನಿತ್ಯದ ಸಾಮಗ್ರಿಗಳೊಂದಿಗಿನ ಕಿಟ್‌ನ್ನು ಜಮೀಯ್ಯತುಲ್ ಫಲಾಹ್ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಇತ್ತೀಚೆಗೆ 125 ಕುಟುಂಬಗಳಿಗೆ ವಿತರಿಸಲಾಯಿತು.

 ಈ ಸಂದರ್ಭ ಸಂಸ್ಧೆಯ ಅಧ್ಯಕ್ಷ ಅಲ್‌ಹಾಜ್ ಇಬ್ರಾಹೀಂ ಕೋಡಿಜಾಲ್, ಕಾರ್ಯದರ್ಶಿ ಎಂ.ಎಚ್. ಮಲಾರ್, ಕೋಶಾಧಿಕಾರಿ ಕೆ.ಎಂ.ಕೆ. ಮಂಜನಾಡಿ, ಸದಸ್ಯರಾದ ಮುಹಮ್ಮದ್ ಬಪ್ಪಾಲ್, ಶೇಖ್ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News