×
Ad

ಕಂಕನಾಡಿ ಮಾರುಕಟ್ಟೆ ಕಾಮಗಾರಿ ಪರಿಶೀಲನೆ

Update: 2019-05-08 18:37 IST

ಮಂಗಳೂರು, ಮೇ 8: ಕಂಕನಾಡಿಯ ನೂತನ ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಪರಿಶೀಲನೆಯನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ನಡೆಸಿದರು.

ಈ ಸಂದರ್ಭ ಮನಪಾ ಆಯುಕ್ತ ನಾರಾಯಣಪ್ಪ, ಎಕ್ಸಿಕ್ಯುಟಿವ್ ಇಂಜಿನಿಯರ್ ನಿಂಗೇಗೌಡ, ಜ್ಯೂನಿಯರ್ ಇಂಜಿನಿಯರ್ ಗಣಪತಿ ಪೂರಕ ಮಾಹಿತಿ ನೀಡಿದರು.

ನೂತನ ವ್ಯವಸ್ಥೆಯಲ್ಲಿ ರಿಕ್ಷಾ ಮತ್ತು ಕಾರುಗಳಿಗೆ ಪಾರ್ಕಿಂಗ್‌ಗೆ ಅನುಮತಿಯನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ರಿಕ್ಷಾ ಮತ್ತು ಕಾರು ಚಾಲಕ ಸಂಘಟನೆಗಳು ಮಂಡಿಸಿದ ಬೇಡಿಕೆಗೆ ಐವನ್ ಡಿಸೋಜ ಸಕಾರಾತ್ಮಕವಾಗಿ ಸ್ಪಂದಿಸಿದರು.

ಕ್ಯಾಬ್ ಯೂನಿಯನ್ ಅಧ್ಯಕ್ಷ ದಿನೇಶ್ ಕುಂಪಲ, ಮ್ಯಾಕೋ ಉಪಾಧ್ಯಕ್ಷ ಶೇಖರ್ ದೇರಳಕಟ್ಟೆ, ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ಸುರೇಶ್ ಶೆಟ್ಟಿ ಜೆಪ್ಪಿನಮೊಗರು, ನವೀನ್ ದೇವಾಡಿಗ, ಗೋಪಾಲಕೃಷ್ಣ, ಖಾದರ್, ಹಮೀದ್, ರಾಜೇಶ್ ವೀರನಗರ, ಗಣೇಶ್ ಉಳ್ಳಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News