‘ಒಪೀಶಿನಾ -19’ ನಾಯಕತ್ವ ತರಬೇತಿ ಶಿಬಿರ

Update: 2019-05-08 14:31 GMT

ಬ್ರಹ್ಮಾವರ, ಮೇ 8: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಡಿವಿಷನ್ ಹಾಗು ಸೆಕ್ಟರ್ ಸಮಿತಿ ಸದಸ್ಯರಿಗೆ ಒಪೀಶಿನಾ ಲೀಡರ್ಸ್‌ ಕಾರ್ಯಾಗಾರವನ್ನು ಇತ್ತೀಚೆಗೆ ಸಾಸ್ತಾನ ಕುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಏರ್ಪಡಿಸ ಲಾಗಿತ್ತು.

ಸಾಸ್ತಾನ ಮಸೀದಿ ಖತೀಬ್, ವಿಭಾಗೀಯ ತರಬೇತುದಾರ ಬಿ.ಎ. ಮಹಮ್ಮದಾಲಿ ಸಹದಿ ಬರುವ ಶಿಬಿರವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷ ಸೈಯದ್ ಯೂಸುಫ್ ತಂಘಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಾಯಕ ಶರೀಫ್ ಸಹದಿ ಕಿಲ್ಲೂರ್ ಕಾರ್ಕಳ ಕಾರ್ಯಾ ಗಾರ ನಡೆಸಿಕೊಟ್ಟರು.

ವಿಭಾಗದ ಗೌರವ ಸಲಹೆಗಾರ ರಝಾಕ್ ಉಸ್ತಾದ್ ಅಂಬಾಗಿಲು, ಮಾಧ್ಯಮ ಘಟಕದ ಸಂಚಾಲಕ ಸಮದ್ ಮದನಿ ಸಾಸ್ತಾನ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಆಸೀಪ್ ಸರಕಾರಿಗುಡ್ಡೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ಶಾಹುಲ್ ದೊಡ್ಡಣಗುಡ್ಡೆ, ಬ್ರಹ್ಮಾವರ ಸೆಕ್ಟರ್ ಉಪಾಧ್ಯಕ್ಷ ರಶೀದ್ ಸಾಸ್ತಾನ, ಡಿವಿಷನ್ ಉಪಾಧ್ಯಕ್ಷ ಮಜೀದ್ ಕಟಪಾಡಿ, ಕೋಶಾಧಿಕಾರಿ ನಝೀರ್ ಸಾಸ್ತಾನ, ಶಾಫಿ ಮದನಿ ಭದ್ರಗಿರಿ, ಸಮೀರ್ ಕಟಪಾಡಿ, ಅಸ್ರಾರ್ ತಂಘಲ್ ಹೂಡೆ, ಫಿರೋಝ್ ಸಾಸ್ತಾನ ಉಪಸ್ಥಿತರಿದ್ದರು.

ಡಿವಿಷನ್ ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News