×
Ad

ಚತ್ತೀಸ್‌ಗಢ: ಎನ್‌ಕೌಂಟರ್‌ ನಲ್ಲಿ ಇಬ್ಬರು ನಕ್ಸಲೀಯರು ಸಾವು

Update: 2019-05-08 20:48 IST
ಸಾಂದರ್ಭಿಕ ಚಿತ್ರ

ದಾಂತೆವಾಡ, ಮೇ 8: ಚತ್ತೀಸ್‌ಗಢದ ದಾಂತೆವಾಡ ಜಿಲ್ಲೆಯಲ್ಲಿ ಭದ್ರತಾ ಪಡೆ ಬುಧವಾರ ಬೆಳಗ್ಗೆ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಮಹಿಳೆ ಸಹಿತ ಇಬ್ಬರು ನಕ್ಸಲರು ಹತರಾಗಿದ್ದಾರೆ.

ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಹಾಗೂ ಸ್ಪೆಷಲ್ ಟಾಸ್ಕ್ ಫೋರ್ಸ್ ಜಂಟಿ ತಂಡ ಗೊಂಡೇರಿಯಾ ಗ್ರಾಮದಲ್ಲಿ ಮುಂಜಾನೆ 5 ಗಂಟೆಗೆ ಎನ್‌ಕೌಂಟರ್ ನಡೆಸಿತು ಎಂದು ಉಪ ಪೊಲೀಸ್ ಅಧೀಕ್ಷಕ (ನಕ್ಸಲ್ ವಿರೋಧಿ ಕಾರ್ಯಾಚರಣೆ) ಸುಂದರ್ ರಾಜ್ ಪಿ. ಹೇಳಿದ್ದಾರೆ.

 ದಾಂತೆವಾಡ-ಸುಕ್ಮಾ ಜಿಲ್ಲೆಗಳ ಗಡಿಯಲ್ಲಿ ಇರುವ ಗೊಂಡೇರಿಯಾದ ಮೂಲಕ ಗಸ್ತು ಪಡೆ ಸಾಗುತ್ತಿದ್ದಾಗ ನಕ್ಸಲರ ಗುಂಪೊಂದು ಗುಂಡಿನ ದಾಳಿ ನಡೆಸಿತು. ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು. ಗುಂಡಿನ ಚಕಮಕಿ ನಿಂತ ಬಳಿಕ ಪರಿಶೀಲನೆ ನಡೆಸಿದಾಗ ಮಹಿಳೆ ಸಹಿತ ಇಬ್ಬರ ನಕ್ಸಲರ ಮೃತದೇಹ, ಇನ್ಸಾಸ್ ರೈಫಲ್, 12 ಬೋರ್ ಗನ್ ಪತ್ತೆಯಾಗಿವೆ.

ಇದಲ್ಲದೆ, ಮಾವೋವಾದಿ ಸಾಹಿತ್ಯ, ಕೆಲವು ಸ್ಫೋಟಕಗಳು, ದಿನನಿತ್ಯ ಬಳಸುವ ವಸ್ತುಗಳು ಹಾಗೂ ನಕ್ಸಲ್ ಸಂಬಂಧಿತ ವಸ್ತುಗಳು ಕೂಡ ಪತ್ತೆಯಾಗಿವೆ ಎಂದು ರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News